ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ
(ಸಿ ಐ ಎನ್ : U31401KA2002SGC030437)

ಅಭಿವೃದ್ಧಿಯ ಪಥದಲ್ಲಿ ವಿದ್ಯುಚ್ಛಕ್ತಿಯೂ ಒಂದು ಅಗತ್ಯದ ಸಂಪನ್ಮೂಲವಾಗಿದೆ. ಯಾವುದೇ ಮುಂದುವರಿಯುತ್ತಿರುವ ಸಮಾಜಕ್ಕೆ ಒಂದು ದಕ್ಷ, ನಂಬಿಕಸ್ಥ ಮತ್ತು ಸುಸಂಘಟಿತ ಹಾಗೂ ಗುಣಮಟ್ಟದ ವಿದ್ಯುತ್ ನೊಂದಿಗೆ ಗುಣಾಧಾರಿತ ಸೇವೆ ನೀಡಬಲ್ಲ ವಿದ್ಯುತ್ ರಂಗ ಅತ್ಯವಶ್ಯಕ. ಕರ್ನಾಟಕ ರಾಜ್ಯದಲ್ಲಿ ಹಿಂದೆ ವಿದ್ಯುತ್ ಕ್ಷೇತ್ರವನ್ನು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೋಡಿಕೊಳ್ಳುತ್ತಿತ್ತು. 1999ರಲ್ಲಿ ರಾಜ್ಯ ಸರ್ಕಾರವು ಮಂಡಳಿಯನ್ನು ಎರಡು ಕಂಪನಿಗಳನ್ನಾಗಿ ವಿಭಜಿಸಿತು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ವಿಶ್ವೇಶ್ವರಯ್ಯ ವಿದ್ಯುತ್ ನಿಗಮ ನಿಯಮಿತ. 1999ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವನ್ನು ಸ್ಥಾಪಿಸಲಾಯಿತು. ಸುಧಾರಣೆಯ ಮುಂದಿನ ಹಂತದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿರ್ವಹಿಸುತ್ತಿದ್ದ ಪ್ರಸರಣ ಮತ್ತು ವಿತರಣಾ ಚಟುವಟಿಕೆಗಳನ್ನು ಬೇರ್ಪಡಿಸಿ ನಾಲ್ಕು ವಿದ್ಯುತ್ ಸರಬರಾಜು ಕಂಪನಿಗಳನ್ನು 2002ರ ಜೂನ್ ತಿಂಗಳಲ್ಲಿ ರಚಿಸಲಾಯಿತು. ಈ ರೀತಿ ರಚಿತವಾದ ಕಂಪೆನಿಗಳಲ್ಲಿ ಕೇಂದ್ರಸ್ಥಾನ ಹುಬ್ಬಳ್ಳಿ ಹೊಂದಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು (ಹೆಸ್ಕಾo)  ಕರ್ನಾಟಕ ರಾಜ್ಯದ ವಿದ್ಯುತ್ ವಿತರಣಾ ಕಂಪನಿಯಲ್ಲಿ ಒಂದಾಗಿದೆ. ಹೆಸ್ಕಾo ಕಂಪನಿಯು ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಜವಾಬ್ದಾರಿಯನ್ನು ಹೊಂದಿರುತ್ತದೆ.

 

 

ಹೆಸ್ಕಾಂ ಕಂಪನಿಯು ಹುಬ್ಬಳ್ಳಿ ನಗರದಿಂದ ಕಾರ್ಯನಿರ್ವಹಿಸುತ್ತಿದ್ದು, ಕೃಷಿ ಕ್ಷೇತ್ರದ ಬಳಕೆಗಾಗಿ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಹೆಸ್ಕಾಂ ಕಂಪನಿಯು ಆರಂಭದ ಪರಿವರ್ತನೆಯ ಸಂದರ್ಭದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿ ದಕ್ಷತೆ ಮತ್ತು ಉತ್ತಮ ಗ್ರಾಹಕ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಸಾಧಿಸಿತು. ಇಂದು ಕರ್ನಾಟಕ ಸರ್ಕಾರ ಕೈಗೊಂಡ ವಿದ್ಯುತ್ ಕ್ಷೇತ್ರ ಸುಧಾರಣೆಗಳ ಅನುಸಾರವಾಗಿ ಕಂಪನಿಯು ಒಂದು ವಾಣಿಜ್ಯ ಘಟಕವಾಗಿ ಕಾರ್ಯ ನಿರ್ವಹಿಸುತ್ತಿದೆ.

ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ, ವಿಶ್ವಾಸಾರ್ಹ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದು ಹೆಸ್ಕಾಂನ ಉದ್ದೇಶವಾಗಿದ್ದು ಈ ಕೆಳಗಿನಂತೆ ಹೆಜ್ಜೆ ಸಾಧಿಸಲು ಹೆಸ್ಕಾಂ ಬದ್ಧವಾಗಿದೆ:

1) ವಿತರಣೆಯಲ್ಲಿ ಅತ್ಯುತ್ತಮ ಪದ್ಧತಿಗಳನ್ನು ಪ್ರೋತ್ಸಾಹಿಸುವುದು.

2) ಎಲ್ಲಾ ತಾಂತ್ರಿಕ ಸೌಲಭ್ಯಗಳ ಉನ್ನತ ಆದೇಶ ನಿರ್ವಹಣೆಗೆ ಅನುವು ಮಾಡುವುದು.

3) ಗ್ರಾಹಕರ ಉತ್ತಮ ಗುಣಮಟ್ಟದ ಸೇವೆಗಳಿಗೆ ಒತ್ತು ನೀಡುವುದು.

 

ಪ್ರದೇಶ ಮತ್ತು ಆಡಳಿತ:

ಹೆಸ್ಕಾಂ ಕಂಪನಿಯು 7 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು 49 ತಾಲ್ಲೂಕುಗಳು ಒಳಗೊಂಡಂತೆ 54513 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದ್ದು 166 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಹೆಸ್ಕಾಂ ಕಂಪನಿಯು ಹುಬ್ಬಳ್ಳಿ ಮತ್ತು ಬೆಳಗಾವಿ ನಗರಗಳಲ್ಲಿ ಕಾರ್ಯ ಮತ್ತು ಪಾಲನಾ ವಲಯನ್ನು ಮುಖ್ಯ ಎಂಜಿನಿಯರ್ (ವಿ) ರವರ ನೇತೃತ್ವದಲ್ಲಿರುತ್ತದೆ. ಹುಬ್ಬಳ್ಳಿ, ಹಾವೇರಿ, ಸಿರಸಿ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕಾರ್ಯ ಮತ್ತು ಪಾಲನಾ ವೃತ್ತ ಕಛೇರಿಗಳನ್ನು ಅಧೀಕ್ಷಕ ಎಂಜಿನಿಯರ್ (ವಿ) ರವರ ನೇತೃತ್ವದಲ್ಲಿರುತ್ತದೆ. ಹೆಸ್ಕಾಂ ಕಂಪನಿಯು 26 ಕಾರ್ಯ ಮತ್ತು ಪಾಲನಾ ವಿಭಾಗಗಳು, 83  - ಕಾರ್ಯ ಮತ್ತು ಪಾಲನಾ ಉಪವಿಭಾಗಗಳು ಮತ್ತು  334  ಕಾರ್ಯ ಮತ್ತು ಪಾಲನಾ ಶಾಖಾ ಕಛೇರಿಯನ್ನು ಹೊಂದಿರುತ್ತದೆ.

ವಿದ್ಯುತ್ ವಿತರಣಾ ಸ್ವತ್ತುಗಳು:

ಹೆಸ್ಕಾಂ 33 ಕೆ.ವಿ. ವಿತರಣಾ ಕೇಂದ್ರಗಳು

180 Nos

11 ಕೆ.ವಿ. ಪೀಡರ್ ಗಳು

4239 Nos

ವಿತರಣಾ ಪರಿವರ್ತಕಗಳು

233782 Nos

ಎಚ್.ಟಿ. ವಿದ್ಯುತ್‌ ಮಾರ್ಗಗಳ ಉದ್ದ

90363.63 ckt Kms

ಎಲ್.ಟಿ. ವಿದ್ಯುತ್‌ ಮಾರ್ಗಗಳ ಉದ್ದ

139279.67 ckt Kms

 

ಹೆಸ್ಕಾಂ ಕಂಪನಿಯ ಅಧಿಕಾರಿಗಳು ಮತ್ತು ನೌಕರರ ವಿವರ:

ಮಂಜೂರಾದ ಹುದ್ದೆ

ಕಾರ್ಯನಿರ್ವಹಿಸುತ್ತಿರುವ ಹುದ್ದೆ

ಖಾಲಿಯಿರುವ ಹುದ್ದೆ

% ಖಾಲಿ

16933

9567

7366

 43.50 %

 

 

 

 

ಇತ್ತೀಚಿನ ನವೀಕರಣ​ : 18-01-2022 10:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080