ಅಭಿಪ್ರಾಯ / ಸಲಹೆಗಳು

ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐ ಪಿ ಡಿ ಯಸ್)

ವೇಗವರ್ಧಿತ ಆರ್ಥಿಕ ಬೆಳವಣಿಗೆಗೆ ವಿದ್ಯುತ್ ಪ್ರಮುಖ ಅಂಶವಾಗಿದೆ ಮತ್ತು ರಾಷ್ಟ್ರದ ಒಟ್ಟಾರೆ ಅಭಿವೃದ್ಧಿಗೆ ಇದು ಪ್ರಮುಖವೆಂದು ಪರಿಗಣಿಸಲಾಗಿದೆ. ವಿತರಣಾ ಕ್ಷೇತ್ರದ ಸಮರ್ಥ ನಿರ್ವಹಣೆಯು ಇಂದು ವಿದ್ಯುತ್ ಕ್ಷೇತ್ರದಲ್ಲಿ ನಿಜವಾದ ಸವಾಲು ಅಗಿರುತ್ತದೆ.

 

ವ್ಯವಸ್ಥೆ ಬಲಪಡಿಸುವುದು:

ಕೇಂದ್ರ ಸರಕಾರವು ವಿದ್ಯುತ್ ವಿತರಣಾ ಕಂಪನಿಗಳ ನಗರ ಪ್ರದೇಶಗಳಲ್ಲಿ ಉಪಪ್ರಸರಣ ಮತ್ತು ವಿತರಣಾ ಜಾಲವನ್ನು ಬಲಪಡಿಸಲು, ಮಾಪಕೀಕರಣದ ಸಲುವಾಗಿ ಅಗತ್ಯವಿರುವ ಹಣಕಾಸಿನ ನೆರವು ವಿಸ್ತರಿಸಲು ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದಿರುತ್ತದೆ.

 

ಈ ಯೋಜನೆಯಡಿಯಲ್ಲಿ ಕೆಳಕಂಡ ಪ್ರಮುಖ ಘಟಕಗಳು ಒಳಗೊಂಡಿರುತ್ತವೆ.

ಅ) ನಗರ ಪ್ರದೇಶಗಳಲ್ಲಿ ಉಪ ಪ್ರಸರಣ ಮತ್ತು ವಿತರಣ ಜಾಲವನ್ನು ಬಲಪಡಿಸುವುದು.

ಆ) ನಗರ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗಗಳಿಗೆ, ವಿದ್ಯುತ್ ಪರಿವರ್ತಕಗಳಿಗೆ ಮತ್ತು ಗ್ರಾಹಕರಿಗೆ ಮಾಪಕಗಳನ್ನು ಅಳವಡಿಸುವುದು.

ಇ) ಸರ್ಕಾರಿ ಕಛೇರಿಗಳ ಕಟ್ಟಡದ ಮೇಲ್ಛಾವಣೆಯಲ್ಲಿ ಸೌರಶಕ್ತಿ ಘಟಕಗಳನ್ನು ನೆಟ್ ಮಾಪಕಗಳ ಸಹಿತ ಅಳವಡಿಸುವುದು.

 

ಮೆ!! ಪವರ್ ಫೈನಾಸ್ಸ್ ಕಾರ್ಪೋರೆಷನ್ (PFC), ನವದೆಹಲಿ ಭಾರತ ಸರ್ಕಾರದ ಪರವಾಗಿ IPDS ಯೋಜನೆಯ ಅನುಷ್ಠಾನಕ್ಕೆ ಮಧ್ಯವರ್ತಿಯಾಗಿ (Nodal Agency) ಕಾರ್ಯಾನಿರ್ವಹಿಸುತ್ತದೆ.

 

ಹು.ವಿ.ಸ.ಕಂ.ನಿ 7 ವೃತ್ತಗಳಾದ ಹುಬ್ಬಳ್ಳಿ, ಹಾವೇರಿ, ಬೆಳಗಾವಿ, ಬಾಗಲಕೋಟ, ವಿಜಯಪುರ, ಚಿಕ್ಕೋಡಿ ಮತ್ತು ಶಿರಸಿಗಳ 73 statutory ಪಟ್ಟಣಗಳನ್ನು (statutory towns) ಸಂಬಂಧಿಸಿದಂತೆ ಮೆ|| ಪಿ.ಎಫ.ಸಿ ಇವರಿಂದ ರೂ. 170.35 ಕೋಟಿ ಮತ್ತು ರೂ. 35.00 ಕೋಟಿ ಯೋಜನಾ ವೆಚ್ಚಕ್ಕೆ ಮಾರ್ಚ -2016 ಮತ್ತು ಫೆಬ್ರವರಿ-2018ರಲ್ಲಿ ಮಂಜೂರಾತಿ ದೊರೆತಿರುತ್ತದೆ. ಪ್ರಸ್ತುತ ಸದರಿ ಕಾಮಗಾರಿಗಳು ಪೂರ್ಣಗೊಂಡಿರುತ್ತದೆ.

 

ಮುಂದುವರೆದು, ಮೆ||ಪಿ.ಎಫ್.ಸಿ ಯು ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರಗಳನ್ನು ಅನುಷ್ಠಾನಗೊಳಿಸಲು  ರೂ. 23.06 ಕೋಟಿ ಮೊತ್ತಕ್ಕೆ ಡಿಸೆಂಬರ್-2018ರಲ್ಲಿ ಮಂಜೂರಾತಿ ನೀಡಿರುತ್ತದೆ. ಅದರಂತೆ, ಹುಬ್ಬಳ್ಳಿ ವೃತ್ತದ ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಲ್ಲಿ 2 ಗ್ಯಾಸ್ ಇನ್ಸುಲೇಟೆಡ್ ವಿದ್ಯುತ್ ಉಪಕೇಂದ್ರಗಳಿಗೆ ಟೆಂಡರ್ ಕರೆದು ಫೆಬ್ರುವರಿ-2020 ರಲ್ಲಿ ಅವಾರ್ಡ್ ನೀಡಲಾಗಿದ್ದು, ಪ್ರಸ್ತುತ ಈ ಕಾಮಗಾರಿಗಳು ಪ್ರಗತಿಯಲ್ಲಿವೆ.

 

 

 

 

 

 

 

ಇತ್ತೀಚಿನ ನವೀಕರಣ​ : 03-08-2020 04:26 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080