ಅಭಿಪ್ರಾಯ / ಸಲಹೆಗಳು

ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಮ್)

ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಮ್):

.

ಇಂಧನ ಸಂರಕ್ಷಣೆ (ಇಸಿ) ಮತ್ತು ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಂ) ಕ್ರಮಗಳನ್ನು ಅಳವಡಿಸಿಕೊಂಡು ಶಕ್ತಿಯನ್ನು ಉಳಿಸುವ, ಶಕ್ತಿಯ ದಕ್ಷ ಬಳಕೆಯ ಜಾಗೃತಿ ಮೂಡಿಸುವ ಕಾರ್ಯ ಯೋಜನೆಗಳನ್ನು ಡಿಎಸ್ಎಮ್ ಸೆಲ್, ಹೆಸ್ಕಾo ಕೈಗೊಳ್ಳುತ್ತಿದೆ.
ವಿದ್ಯುಚ್ಛಕ್ತಿ ಬೇಡಿಕೆಯ ಸಮಯ ಮತ್ತು ಬೇಡಿಕೆಗಳಿಗೆ ಸಂಬಂಧಿಸಿದಂತೆ ತಮ್ಮ ವಿದ್ಯುಚ್ಛಕ್ತಿ ಬಳಕೆ ವಿಧಾನಗಳನ್ನು ಮಾರ್ಪಡಿಸುವ ಮೂಲಕ ಹಾಗೂ ದಕ್ಷ ವಿದ್ಯುತ್ ಉಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸಲು ಪ್ರೋತ್ಸಾಹಿಸಲು ಹೆಸ್ಕಾಂ ದಿಂದ ಕೈಗೊಂಡ ಕ್ರಮಗಳು:

1. ಹೊಸ ಬೆಳಕು ಯೋಜನೆ: ಹೆಸ್ಕಾಂನಲ್ಲಿ ದಿನಾಂಕ: 04-02-2016 ರಿಂದ ಎಲ್ಇಡಿ ಬಲ್ಬುಗಳ ಉಪಯೋಗದ ಬಗ್ಗೆ ಅರಿವು ಮೂಡಿಸುವ ‘ಹೊಸಬೆಳಕು’ ಯೋಜನೆ ಇ.ಇ.ಎಸ್.ಎಲ್ ವತಿಯಿಂದ ಜಾರಿಯಲ್ಲಿದೆ. ಜೂಲೈ 2021 ರವರೆಗೆ ಮಾರಾಟ ಮತ್ತು ಇಂಧನ ಉಳಿತಾಯದ ವಿವರ,

ಕ್ರ.ಸಂ. ವಿವರಗಳು ಜೂಲೈ 2021 ರ ವರೆಗೆ ಮಾರಾಟವಾದ ವಿವರ ಜೂಲೈ 2021 ರ ವರೆಗೆ ಇಂಧನ ಉಳಿತಾಯದ ವಿವರ (ಮಿ. ಯು)
01 ಎಲ್ಇಡಿ ಬಲ್ಬ್ ಗಳು 25,03,839 250.33
02 ಎಲ್ ಇ ಡಿ ಟ್ಯೂಬಲೈಟ್ಗಳು 31,924 3.10
03 ಇಂಧನ ದಕ್ಷ ಫ್ಯಾನ್ ಗಳು 6,825 0.73
ಒಟ್ಟು 254.16

 

2. ಹೆಸ್ಕಾಂನ ಎಲ್ಲ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ ರೀಂಗ್ ಬ್ಯಾಕ್ ಟೋನ್:
ಹೆಸ್ಕಾಂನ ಎಲ್ಲಾ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ, ಹೆಸ್ಕಾಂನ ಸೇವಾ ಸೌಲಭ್ಯಗಳು, ಹೆಸ್ಕಾಂ 24ಗಂಟೆ ಸಹಾಯವಾಣಿ 1912, ಎಲ್.ಇ.ಡಿ ದೀಪಗಳ ಬಗ್ಗೆ ಒಳಗೊಂಡ ರೀಂಗ್ ಬ್ಯಾಕ್ ಟೋನ್‌ನ್ನು ದಿನಾಂಕ: 17.04.2017 ರಿಂದ ಅಳವಡಿಸಿ ಅರಿವು ಮೂಡಿಸಲಾಗುತ್ತಿದೆ

3. ಕೆಪ್ಯಾಸಿಟಿ ಬಿಲ್ಡಿಂಗ್ ಪ್ರೊಗ್ರಾಮ್ (Capacity Building Program): ಸಾಮರ್ಥ್ಯ ನಿರ್ವಹಣಾ ಕಾರ್ಯಕ್ರಮ
• ಈ ಕಾರ್ಯಕ್ರಮಕ್ಕೆ ಅಗಸ್ಟ 29 2018 ರಲ್ಲಿ ಬಿ.ಇ.ಇ, ಕೆ.ಆರ್.ಡಿ.ಎಲ್ ಮತ್ತು ಹೆಸ್ಕಾಂ ನಡುವೆ ಒಪ್ಪಂದವಾಗಿರುತ್ತದೆ. ಈ ಕಾರ್ಯಕ್ರಮದಡಿಯಲ್ಲಿ ಬಿಇಇ ನೀಯೋಜಿಸಿದ ಸಿಐಐ ತಂಡವು ಇಂಧನ ದಕ್ಷತೆ ಮತ್ತು ಡಿ.ಎಸ್.ಎಮ್ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಹೆಸ್ಕಾಂ ಅಧಿಕಾರಿಗಳಿಗೆ ನೀಡಲಾಯಿತು.
• ಸಿಐಐ ಅವರು 5 ದಿನಗಳ ಮಾಸ್ಟರ್ ಟ್ರೆನರ್ಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ 15.01.2019 ರಿಂದ 19.01.2019 ರ ವರೆಗೆ ಹುಬ್ಬಳ್ಳಿಯ ನವೀನ ಹೋಟೆಲ್ ನಲ್ಲಿ ನಡೆಸಿದರು, ಈ ತರಬೇತಿಯಲ್ಲಿ 43 ಹೆಸ್ಕಾಂನ ಅಧಿಕಾರಿಗಳು ಭಾಗವಹಿಸಿದ್ದರು.
• 3 ದಿನಗಳ ವೃತ್ತವಾರು ತರಬೇತಿ ಕಾರ್ಯಕ್ರಮವನ್ನು (ಬಾಗಲಕೋಟ ಮತ್ತು ವಿಜಯಪುರ ವೃತ್ತ) ದಿನಾಂಕ 05.12.2019 ರಿಂದ 07.12.2019ರ ವರೆಗೆ ಬಾಗಲಕೋಟನ ಕ್ಲರ್ಕ ಇನ್ನ್ ಹೋಟೆಲ್ನಲ್ಲಿ ನಡೆಸಿದರು, ಈ ತರಬೇತಿಯಲ್ಲಿ 34 ಹೆಸ್ಕಾಂನ ಅಧಿಕಾರಿಗಳು ಭಾಗವಹಿಸಿದ್ದರು.
• 3 ದಿನಗಳ ವೃತ್ತವಾರು ತರಬೇತಿ ಕಾರ್ಯಕ್ರಮವನ್ನು (ಬೆಳಗಾವಿ ಮತ್ತು ಚಿಕ್ಕೋಡಿ ವೃತ್ತ) ದಿನಾಂಕ 09.12.2019 ರಿಂದ 11.12.2019ರ ವರೆಗೆ ಬೆಳಗಾವಿನ ಚಾನ್ಸರಿ ಹೋಟೆಲ್ನಲ್ಲಿ ನಡೆಸಿದರು, ಈ ತರಬೇತಿಯಲ್ಲಿ 36 ಹೆಸ್ಕಾಂನ ಅಧಿಕಾರಿಗಳು ಭಾಗವಹಿಸಿದ್ದರು
• ಕೆಪ್ಯಾಸಿಟಿ ಬಿಲ್ಡಿಂಗ್ ಪ್ರೊಗ್ರಾಮ್ ಸಾಮರ್ಥ್ಯ ನಿರ್ವಹಣಾ ಕಾರ್ಯಕ್ರಮದಡಿಯಲ್ಲಿ ಬರುವ ಚಟುವಟಿಕೆಗಳು ಹೆಸ್ಕಾಂನ  ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಲೋಡ್ ಅನ್ನು ಗರಿಷ್ಠ ಬೇಡಿಕೆಯಿಂದ ನೇರ ಬೇಡಿಕೆಯ ಅವಧಿಗೆ ವರ್ಗಾಯಿಸುವುದು, ದಿನದ ಸಮಯದ ಆಧಾರದ ಮೇಲೆ ವಿಭಿನ್ನ ದರಗಳನ್ನು ಹೊಂದಲು, ಹಾಗೂ ವೆಚ್ಚ ಪರಿಣಾಮಕಾರಿ ಕಾರ್ಯ್ಯತಂತ್ರಗಳ ಮೂಲಕ ಇಂಧನ ದಕ್ಷತೆಯನ್ನು ಸುಧಾರಿಸಲು ಸೇರಿದಂತೆ ಡಿಎಸ್ಎಂ ಕ್ರಿಯಾ ಯೋಜನೆಯನ್ನು ಕಾರ್ಯ್ಯಗತಗೊಳಿಸಲು ಹೆಸ್ಕಾಂಗೆ ಅನುವು ಮಾಡಿಕೊಡುತ್ತದೆ.

4. ಪತ್ರಿಕಾ ಮಾಧ್ಯಮ: ವಿಶೇಷ ದಿನಗಳಲ್ಲಿ ದಿನ ಪತ್ರಿಕೆಗಳಲ್ಲಿ ವಿದ್ಯುತ್ ಬಳಕೆಯಲ್ಲಿ ಉಳಿತಾಯದ ಕ್ರಮಗಳು, ಎಲ್.ಇ.ಡಿ. ಬಳಕೆಯ ಪ್ರಯೋಜನಗಳು, ಸುರಕ್ಷತೆಯ ಸಲಹೆಗಳು, ಸೌರಶಕ್ತಿ ಉತ್ಪಾದನೆಗಾಗಿ ಜಾಗೃತಿಗಳನ್ನು ಜಾಹೀರಾತು ನೀಡುವುದರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.


5. ರೇಡಿಯೋ ಮಾಧ್ಯಮ: ಇಂಧನ ಉಳಿತಾಯ, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು ಬಿಲ್ ಪಾವತಿ, ಸುರಕ್ಷತಾ ಕಾರ್ಯ್ಯವಿಧಾನಗಳು ಮತ್ತು ಹೆಸ್ಕಾಂ ಸೇವೆಗಳ ಬಗ್ಗೆ ಜಾಗೃತಿ, ಸೋಲಾರ್ ಮೇಲ್ಛಾವಣಿ ಪಿವಿ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು ಇತ್ಯಾದಿಗಳ ಕುರಿತು ಜಿಂಗಲ್ಸ್ ಮತ್ತು ಕಾರ್ಯ್ಯಕ್ರಮದ ಮೂಲಕ. ಆಲ್ ಇಂಡಿಯಾ ರೇಡಿಯೊದ ಪ್ರೈಮರಿ ಚಾನೆಲ್‌ನಲ್ಲಿ ಪ್ರಸಾರ (01.12.2017 ರಿಂದ 31.03.2018 ರವರೆಗೆ) (16.07.2019 ರಿಂದ 31.03.2020 ರವರೆಗೆ) ಮತ್ತು (16.07.2020 ರಿಂದ 31.03.2021 ರವರೆಗೆ)

6. ಹೆಸ್ಕಾಂ ಕ್ಯಾಲೆಂಡರ್:  ಹೆಸ್ಕಾಂ ಕ್ಯಾಲೆಂಡರ್-2018, 2019, 2020ರ ಮುಖಾಂತರ ವಿದ್ಯುತ್ ಉಪಯುಕ್ತ ಮಾಹಿತಿ, ಹೆಸ್ಕಾಂನ ಯೋಜನೆ, ವಿದ್ಯುತ್ ಉಳಿತಾಯದ ಕ್ರಮಗಳು, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು, ಸೌರಶಕ್ತಿ ಉತ್ಪಾದನೆಗಾಗಿ ಜಾಗೃತಿ, ಹೆಸ್ಕಾಂ 24 ಗಂಟೆ ಸಹಾಯವಾಣಿ 1912, ಹೆಸ್ಕಾಂ ಸೇವೆಗಳು ಇತ್ಯಾದಿಗಳ ಬಗ್ಗೆ ಪ್ರಚಾರ ಮಾಡಲಾಗಿದೆ.

7. ಶೈಕ್ಷಣಿಕ / ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ಇಂಧನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸಲು ಶೈಕ್ಷಣಿಕ / ಶಿಕ್ಷಣ ಸಂಸ್ಥೆಗಳೊಂದಿಗೆ ಎನ್‌ಜಿಒ-ದೇಶಪಾಂಡೆ ಶಿಕ್ಷಣ ಟ್ರಸ್ಟ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

8. ಹೆಸ್ಕಾಂ ಡಿಎಸ್ಎಮ್ / ಎನರ್ಜಿ ದಕ್ಷತೆಯ ಕಾರ್ಯಕ್ರಮಗಳ ಅಡಿಯಲ್ಲಿ ಇತರ ಎಸ್ಕಾಂ ಗಳು ಎಂ.ಎನ್.ಆರ್.ಇ, ಎಸ್ಇಸಿಐ, ಕೆ.ಆರ್‌.ಡಿ.ಎಲ್ ಮತ್ತು ಇಂಧನ ಇಲಾಖೆಯೊಂದಿಗೆ ಸಂಯೋಜಿಸುತ್ತದೆ.

ಡಿ ಎಸ್‌ ಎಮ್ ಶಾಖೆಯಿಂದ ವರ್ಷವಾರು ಗ್ರಾಹಕರಲ್ಲಿ ಈ ಕೆಳಕಂಡ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಲಾದ ಕಾರ್ಯಗಳ ವಿವರಗಳು.
•    ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು,
•    ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದು,
•    ಸೋಲಾರ್ ಮೇಲ್ಛಾವಣಿ ಪಿವಿ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು ಮತ್ತು ಹೆಸ್ಕಾಂ ಸೇವೆಗಳ ಬಗ್ಗೆ ಜಾಗೃತಿ,
•    ಬೀದಿ ದೀಪಗಳಿಗೆ ಕಡ್ಡಾಯವಾಗಿ ಎಲ್ ಇ ಡಿ ದೀಪ/ದಕ್ಷ ಇಂಧನ ದೀಪಗಳಾದ ಇಂಡಕ್ಷನ್ ಲ್ಯಾಂಪಗಳನ್ನು ಹಾಗೂ ಟೈಮರ್ ಸ್ವಿಚ್‌ಗಳನ್ನು ಅಳವಡಿಸುವುದು,
•    ನೀರಾವರಿ ಪಂಪಸೆಟ್‌ಗಳಿಗೆ ಕಡ್ಡಾಯವಾಗಿ ಹೆಚ್ಚಿನ ಕಾರ್ಯಕ್ಷಮತೆಯುಳ್ಳ (Energy Efficient) 5 ಸ್ಟಾರ್ ರೇಟೆಡ್ ಪಂಪ್‌ಗಳನ್ನೇ ಅಳವಡಿಸುವುದು,
•    ಇಂಧನ ಉಳಿತಾಯ, ಸುರಕ್ಷತಾ ಕಾರ್ಯವಿಧಾನಗಳು ಡಿಎಸ್‌ಎಂ ಸಲಹೆಗಳು, ಇಂಧನ ದಕ್ಷತೆಯ ವಿಧಾನಗಳು, ಇತರೆ.
•    ಸಹಾಯವಾಣಿ ಸಂಖ್ಯೆ 1912.ಆರ್ಥಿಕ ವರ್ಷ 2018-19


1. ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ ಉತ್ಸವ – ಮೆಲಂಜೆ : ಈ ಉತ್ಸವವು ದಿನಾಂಕ 5– 6 ಎಪ್ರೀಲ್ 2018 ರಂದು ಎಸ್ ಕೆ ಎಸ್ ವಿ ಎಮ್ ಅಂಗಡಿ ಕಾಲೇಜು  ಲಕ್ಷ್ಮೇಶ್ವರ ನಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು.


2. 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ:
•    ದಿನಾಂಕ 04.01.2019 ರಿಂದ 06.01.2019ರ ವರೆಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು.
•    ಸಮ್ಮೇಳನದಲ್ಲಿ ‘ವಿದ್ಯುತ್ ಉಳಿತಾಯದ’ ಘೋಷಣಾ ಇರುವ ಟಿ-ಶರ್ಟಗಳನ್ನು ಸ್ವಯಂ ಸೇವಕರಿಗೆ ವಿತರಿಸುವ ಮೂಲಕ ‘ಡಿ.ಎಸ್.ಎಮ್’ ಕಾರ್ಯಕ್ರಮ’ ಮಾಡಲಾಯಿತು
3. ವಿದ್ಯುತ್ ಉಳಿತಾಯ ಸಮರ:
      ದೇಶಪಾಂಡೆ ಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ ಮತ್ತು ಹೆಸ್ಕಾಮ್ನ ಜಂಟಿ ಸಹಯೋಗದಡಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಇಂಧನ ಸಂರಕ್ಷಣೆ, ಸುರಕ್ಷತೆ ಇತ್ಯಾದಿಗಳ ಬಗ್ಗೆ ಜಾಗೃತಿ / ಶಿಕ್ಷಣ ಕಾರ್ಯ್ಯಕ್ರಮಗಳನ್ನು ಗ್ರಾಮೀಣ, ಅರೆ ನಗರ ಮತ್ತು ನಗರ ಯುವಕರಿಗೆ, ಕೈಗೊಳ್ಳಲಾಯಿತು.
•    DSM-Life Skill for students: ಈ ಕಾರ್ಯಕ್ರಮದಲ್ಲಿ 231 ಐಟಿಐ ಕಾಲೇಜಿನಲ್ಲಿ ಜಾಗೃತಿ ಕಾರ್ಯ್ಯಕ್ರಮಗಳನ್ನು  ನಡೆಸಲಾಯಿತು.
•    ವಿದ್ಯುತ್ ಉಳಿತಾಯ ಸಮರ ರಸ ಪ್ರಶ್ನೆ: ಈ ಕಾರ್ಯಕ್ರಮದಲ್ಲಿ ವಿವಿಧ ಐಟಿಐ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.

ಆರ್ಥಿಕ ವರ್ಷ 2019-20


1.    ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ ಉತ್ಸವ – ಮೆಲಂಜೆ : ಈ ಉತ್ಸವವು ದಿನಾಂಕ 26 – 27 ಎಪ್ರೀಲ್ 2019 ರಂದು ಎಸ್ ಕೆ ಎಸ್ ವಿ ಎಮ್ ಅಂಗಡಿ ಕಾಲೇಜು ಲಕ್ಷ್ಮೇಶ್ವರ ನಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು, ಈ ಕಾರ್ಯಕ್ರಮದಲ್ಲಿ 4000 ವಿಧ್ಯಾರ್ಥಿಗಳು ಭಾಗವಹಿಸಿದರು.
2.    ವಿಜಯವಾಣಿ ಪ್ರಾಪರ್ಟಿ ಎಕ್ಸ್‌ಪೋ 2019 : ಮೇ 03 ರಿಂದ 05 ರ ವರೆಗೆ ಹುಬ್ಬಳ್ಳಿಯ ರಾಯ್ಕರ್ ಮೈದಾನದಲ್ಲಿ ನಡೆಯಿತು. ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು, ಈ ಕಾರ್ಯಕ್ರಮಕ್ಕೆ ಸುಮಾರು 50,000 ಜನ ಭೇಟಿ ಮಾಡಿದ್ದರು.
3.    ಮಾಸಿಕ ಬಿಲ್ ಜೊತೆ ಕರಪತ್ರಗಳ ವಿತರಣೆ: 20,00,000 ಕರಪತ್ರಗಳನ್ನು ಜೂನ್ 2019 ರಿಂದ ಮಾಸಿಕ ಬಿಲ್ ಜೊತೆ ಎಲ್ಲಾ ಗ್ರಾಹಕರಿಗೆ ವಿತರಿಸಲಾಯಿತು, ಕರಪತ್ರಗಳಲ್ಲಿ ವಿದ್ಯುತ್ ಬಳಕೆಯಲ್ಲಿ ಉಳಿತಾಯದ ಕ್ರಮಗಳು, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು, ಸುರಕ್ಷತೆಯ ಸಲಹೆಗಳು, ಸೌರಶಕ್ತಿ ಬಳಸುವುದು, ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
4.    ಹೆಸ್ಕಾಂನ ಪ್ರತಿ ಶಾಖೆಯಲ್ಲಿ ಗ್ರಾಹಕ/ ಸಾರ್ವಜನಿಕ  ಜಾಗೃತಿ ಸಭೆ: (ಜುಲೈ 2019- ಅಗಸ್ಟ್ 2019) ಹೆಸ್ಕಾಂನ 246 ಶಾಖೆಯ ಸಾರ್ವಜನಿಕ ಸ್ಥಳದಲ್ಲಿ ಕಾರ್ಯ್ಯಕ್ರಮಗಳನ್ನು ನಡೆಸುವುದರ ಮೂಲಕ ಗ್ರಾಹಕ / ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. 23000 ಜನ ಭಾಗವಹಿಸಿದರು.
5.    ಹೆಸ್ಕಾಂನ ಪ್ರತಿ ಶಾಖೆಯಲ್ಲಿ ಗ್ರಾಹಕ/ ಸಾರ್ವಜನಿಕ ಜಾಗೃತಿ ಸಭೆ: (ಫೆಬ್ರವರಿ 2020) ಹೆಸ್ಕಾಂನ 201 ಶಾಖೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾರ್ಯ್ಯಕ್ರಮಗಳನ್ನು ನಡೆಸುವುದರ ಮೂಲಕ ಗ್ರಾಹಕ / ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. 15000 ಜನ ಭಾಗವಹಿಸಿದರು.
6.    PARSEC 2020: ದಿನಾಂಕ 15.02.2020 ರಿಂದ 16.02.2020 ರ ವರೆಗೆ ಐಐಟಿ ಕ್ಯಾಂಪಸ್‌, ಧಾರವಾಡದಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು.
7.    Festival of Wrestling : ದಿನಾಂಕ 22.02.2020 ರಿಂದ 25.02.2020 ರ ವರೆಗೆ ಕೆ ಸಿ ಡಿ ಮೈದಾನ, ಧಾರವಾಡದಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಸುಮಾರು 50,000-60,000 ಜನ ಭೇಟಿ ಮಾಡಿದ್ದರು.

 
ಸೌರ ಮೇಲ್ಛಾವಣಿ ಯೋಜನೆ:
ನವೀಕರಿಸಬಹುದಾದ ಇಂಧನವಾದ ಸೌರ ವಿದ್ಯುತ್ ಉತ್ಪಾದನೆಗೆ ಕರ್ನಾಟಕ ಸರ್ಕಾರದಿಂದ ಸೋಲಾರ್ ನೀತಿ 2014-21 ಅನ್ನು ದಿನಾಂಕ: 22.05.2014 ರಂದು ಜಾರಿಗೊಳಿಸಲಾಗಿರುತ್ತದೆ. ಸದರಿ ನೀತಿಯಲ್ಲಿ ಮೇಲ್ಛಾವಣಿ ಸೌರಶಕ್ತಿ ಯೋಜನೆಯಡಿಯಲ್ಲಿ ರಾಜ್ಯದಿಂದ 2022 ರೊಳಗೆ 2400 ಮೆ.ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ನಿಗದಿ ಪಡಿಸಿದ್ದು, ಗೃಹಬಳಕೆ, ಕೈಗಾರಿಕಾ, ವಾಣಿಜ್ಯ ಮತ್ತು ಇತರೆ ಗ್ರಾಹಕರು ನೆಟ್ ಅಥವಾ ಗ್ರಾಸ್ ಮೀಟರಿಂಗ್ ವ್ಯವಸ್ಥೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಹುವಿಸಕಂಪನಿ ಸೌರ ಮೇಲ್ಛಾವಣಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಗ್ರಾಹಕರು ಸೋಲಾರ್ನಿಂದ ಉತ್ಪಾದಿಸಿರುವ ವಿದ್ಯುತ್ ಅನ್ನು ನೆಟ್ ಮೀಟರಿಂಗ್ ವ್ಯವಸ್ಥೆಯಲ್ಲಿ ಸ್ವಂತ ಬಳಕೆಯ ನಂತರ ಉಳಿದ ವಿದ್ಯುತ್ ಅನ್ನು ಹಾಗೂ ಗ್ರಾಸ್ ಮೀಟರಿಂಗ್ ವ್ಯವಸ್ಥೆಯಲ್ಲಿ ಉತ್ಪಾದಿಸಿರುವ ಸಂಪೂರ್ಣ ವಿದ್ಯುತ್ ಅನ್ನು ವಿದ್ಯುತ್ ವಿತರಣಾ ಕಂಪನಿಗಳಿಗೆ ಮಾನ್ಯ ಕೆ.ಇ.ಆರ್.ಸಿ ರವರು ನಿಗದಿಪಡಿಸಿರುವ ದರದಲ್ಲಿ ಮಾರಾಟ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಕಳೆದ 6.5 ವರ್ಷಗಳಿಂದ ಒಟ್ಟು 1643 ಸಂಖ್ಯೆಗಳ ಸೌರ ಘಟಕಗಳಿಂದ 41.16 ಮೆ.ವ್ಯಾಟ್ ಜೂಲೈ 2021ರ ವರೆಗೆ ಸಾಮರ್ಥ್ಯದ ಸೌರ ಫಲಕಗಳನ್ನು ಹುವಿಸಕಂಪನಿಯ ವಿದ್ಯುತ ಜಾಲಕ್ಕೆ ಸಂಪರ್ಕಗೊಳಿಸಲಾಗಿದೆ.


ವಿದ್ಯುತ ವಾಹನ ಚಾರ್ಜಿಂಗ್‌ ಕೇಂದ್ರಗಳು:


ದಿನಾಂಕ 14.12.2018 ರಂದು ವಿದ್ಯುತ ವಾಹನ ಚಾರ್ಜಿಂಗ್‌ ಕೇಂದ್ರಗಳ ಕುರಿತಾಗಿ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸುರುತ್ತದೆ. ಕರ್ನಾಟಕ ಸರ್ಕಾರದ ದಿ:28.12.2018 ರ ಪತ್ರದನ್ವಯ ಬೆಸ್ಕಾಂ ನ್ನು ರಾಜ್ಯದಲ್ಲಿ ವಿದ್ಯುತ ವಾಹನ ಚಾರ್ಜಿಂಗ್‌ ಕೇಂದ್ರಗಳ ಮೂಲ ಸೌಕರ್ಯಗಳನ್ನು ಸ್ಥಾಪಿಸಲು ನೋಡಲ್‌ ಏಜೇನ್ಸಿಯನ್ನಾಗಿ ನೇಮಿಸಿದೆ.
ಸ್ಮಾರ್ಟ ಸಿಟಿಗಳಿಗೆ ಆದ್ಯತೆ ನೀಡಿ, ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ ವಾಹನ ಚಾರ್ಜಿಂಗ್‌ ಕೇಂದ್ರಗಳನ್ನು ಗುರುತಿಸಲು ಬೆಸ್ಕಾಂ ಕೋರಿರುವ ಪ್ರಯುಕ್ತ, ಹುಬ್ಬಳ್ಳಿ-ಧಾರವಾಡ ನಗರದಲ್ಲಿ 46 ಹಾಗೂ ಬೆಳಗಾವಿ ನಗರದಲ್ಲಿ 28 ಸ್ಥಳಗಳನ್ನು ಗುರುತಿಸಿದ್ದು, ಗುರುತಿಸಿದ ಸ್ಥಳಗಳು ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳನ್ನೊಳಗೊಂಡಿರುತ್ತವೆ. ಕೇಂದ್ರ ಸರ್ಕಾರವು ದಿನಾಂಕ 14.12.2018 ರಂದು ಹೊರಡಿಸಿದ ವಿದ್ಯುತ ವಾಹನ ಚಾರ್ಜಿಂಗ್‌ ಕೇಂದ್ರಗಳ ಮಾರ್ಗಸೂಚಿಯನ್ನು ದಿನಾಂಕ:01.10.2019 ರಂದು ಪರಿಷ್ಕರಿಸಿ ಮತ್ತೊಮ್ಮೆ ಮಾರ್ಗಸೂಚಿಯನ್ನು ಹೊರಡಿಸಿರುತ್ತದೆ.

 ಇತರೆ ಮಾಹಿತಿಗಳು :

ಕ್ರಮ ಸಂಖ್ಯೆ

ವಿವರಗಳು

 

ಗಾತ್ರ

ವೀಕ್ಷಿಸಿ/ಡೌನಲೋಡ್‌

01 ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಂ) ಜಾಗೃತಿ ಕರಪತ್ರ. 3415 ಕೆಬಿ
02 ಪತ್ರಿಕೆಗಳ ಮೂಲಕ ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಂ) ಜಾಗೃತಿ ಜಾಹೀರಾತಿನ ಮಾದರಿಗಳು. 24769 ಕೆಬಿ 
03 ಡಿ ಎಸ್ ಎಮ್ ಜಾಗೃತಿ ಕಾರ್ಯಕ್ರಮಗಳ ಚಿತ್ರ ಭಂಡಾರ -
04 ಡಿ ಎಸ್ ಎಮ್ ಕಾರ್ಯಕ್ರಮದಡಿಯಲ್ಲಿ ಇಂಧನ ಉಳಿತಾಯ, ಸುರಕ್ಷತೆ, ಹೆಸ್ಕಾಂ ಸೇವೆ, ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವ ಜಿಂಗಲ್ಸ್, ಆಕಾಶವಾಣಿ ಧಾರವಾಡ ಪ್ರೈಮರಿ ಚಾನಲ್ ನಲ್ಲಿ ಪ್ರಸಾರ. 1. ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದು 587 ಕೆಬಿ 
2. ಎಲ್ಇಡಿ ಬಲ್ಬ್ ಗಳನ್ನು ಬಳಸುವ ಕುರಿತು ಜಾಗೃತಿ 451 ಕೆಬಿ 
3. ಐಎಸ್ಐ ಉಪಕರಣಗಳನ್ನು ಬಳಸುವುದು 536 ಕೆಬಿ 
4. ನೈಸರ್ಗಿಕ ಬೆಳಕನ್ನು ಬಳಸಿಕೊಂಡು ವಿದ್ಯುತ್ ಉಳಿತಾಯದ ಸಲಹೆ 377 ಕೆಬಿ 
5. ರೆಫ್ರಿಜರೇಟರ್ ಬಳಕೆಯಲ್ಲಿ ವಿದ್ಯುತ್ ಉಳಿತಾಯದ ಸಲಹೆ 569 ಕೆಬಿ 
6. ವಿದ್ಯುತ್ ಉಳಿತಾಯದ ಸಲಹೆಗಳು 466 ಕೆಬಿ 
7. ಸುರಕ್ಷತೆಯ ಅರಿವು 1 494 ಕೆಬಿ 
8. ಸುರಕ್ಷತೆಯ ಅರಿವು 2 464 ಕೆಬಿ 
9. ಸುರಕ್ಷತೆಯ ಅರಿವು 3 547 ಕೆಬಿ 
10. ಆನ್ಲೈನ್ ಪಾವತಿ 643 ಕೆಬಿ 
05 ಹೆಸ್ಕಾಂ ವ್ಯಾಪ್ತಿಯಲ್ಲಿನ  ಹೊಸಬೆಳಕು ಯೋಜನೆ ಅಡಿಯಲ್ಲಿ  ಇಇಎಸ್ಎಲ್  ವತಿಯಿಂದಿರುವ ಜಿಲ್ಲಾವಾರು ಉಜಾಲಾ ಕೇಂದ್ರಗಳು. 845 ಕೆಬಿ

 

 

 

 

 

ಇತ್ತೀಚಿನ ನವೀಕರಣ​ : 09-08-2021 12:11 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080