ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಮ್):

ಇಂಧನ ಸಂರಕ್ಷಣೆ (ಇಸಿ) ಮತ್ತು ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಂ) ಕ್ರಮಗಳನ್ನು ಅಳವಡಿಸಿಕೊಂಡು ಶಕ್ತಿಯನ್ನು ಉಳಿಸುವ, ಶಕ್ತಿಯ ದಕ್ಷ ಬಳಕೆಯ ಜಾಗೃತಿ ಮೂಡಿಸುವ ಕಾರ್ಯ ಯೋಜನೆಗಳನ್ನು ಡಿಎಸ್ಎಮ್ ಸೆಲ್, ಹೆಸ್ಕಾo ಕೈಗೊಳ್ಳುತ್ತಿದೆ.
ಇಂಧನ ಉಳಿತಾಯ, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು ಮತ್ತು ಹೆಸ್ಕಾಂ ಸೇವೆಗಳ ಬಗ್ಗೆ ಜಾಗೃತಿ, ಸೋಲಾರ್ ಮೇಲ್ಛಾವಣಿ ಪಿವಿ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು ಇತ್ಯಾದಿಗಳ ಕುರಿತು ಜಾಗೃತಿಯನ್ನು ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದರ ಮೂಲಕ, ಆಡಿಯೋ, ರೇಡಿಯೋ, ಸಾಮಾಜಿಕ ಮಾಧ್ಯಮ, ರೀಂಗ್ ಬ್ಯಾಕ್ ಟೋನ್ ಮತ್ತು ಹೆಸ್ಕಾಂನ ವಿಭಾಗಗಳಲ್ಲಿ ಮತ್ತು ಜಿಲ್ಲೆ/ತಾಲೂಕು/ಕಾಲೇಜು/ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ವಿದ್ಯುಚ್ಛಕ್ತಿ ಬೇಡಿಕೆಯ ಸಮಯ ಮತ್ತು ಬೇಡಿಕೆಗಳಿಗೆ ಸಂಬಂಧಿಸಿದಂತೆ ತಮ್ಮ ವಿದ್ಯುಚ್ಛಕ್ತಿ ಬಳಕೆ ವಿಧಾನಗಳನ್ನು ಮಾರ್ಪಡಿಸುವ ಮೂಲಕ ಹಾಗೂ ದಕ್ಷ ವಿದ್ಯುತ್ ಉಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸಲು ಪ್ರೋತ್ಸಾಹಿಸಲು ಹೆಸ್ಕಾಂ ದಿಂದ ಕೈಗೊಂಡ ಕ್ರಮಗಳು:
1. ಹೊಸ ಬೆಳಕು ಯೋಜನೆ: ಹೆಸ್ಕಾಂನಲ್ಲಿ ದಿನಾಂಕ: 04-02-2016 ರಿಂದ ಎಲ್ಇಡಿ ಬಲ್ಬುಗಳ ಉಪಯೋಗದ ಬಗ್ಗೆ ಅರಿವು ಮೂಡಿಸುವ ‘ಹೊಸಬೆಳಕು’ ಯೋಜನೆ ಇ.ಇ.ಎಸ್.ಎಲ್ ವತಿಯಿಂದ ಜಾರಿಯಲ್ಲಿದೆ. ಮೇ 2022 ರವರೆಗೆ ಮಾರಾಟ ಮತ್ತು ಇಂಧನ ಉಳಿತಾಯದ ವಿವರ,
| ಕ್ರ.ಸಂ. |
ವಿವರಗಳು |
ಮೇ 2022 ರ ವರೆಗೆ ಮಾರಾಟವಾದ ವಿವರ |
ಮೇ 2022 ರ ವರೆಗೆ ಇಂಧನ ಉಳಿತಾಯದ ವಿವರ (ಮಿ. ಯು)
|
| 01 |
ಎಲ್ಇಡಿ ಬಲ್ಬ್ ಗಳು |
25,17,808 |
296.44 |
| 02 |
ಎಲ್ ಇ ಡಿ ಟ್ಯೂಬಲೈಟ್ಗಳು |
32,264 |
3.75 |
| 03 |
ಇಂಧನ ದಕ್ಷ ಫ್ಯಾನ್ ಗಳು |
6,825 |
0.92 |
| ಒಟ್ಟು |
301.11 |
2. ಹೆಸ್ಕಾಂನ ಎಲ್ಲ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ ರೀಂಗ್ ಬ್ಯಾಕ್ ಟೋನ್:
ಹೆಸ್ಕಾಂನ ಎಲ್ಲಾ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ, ಹೆಸ್ಕಾಂನ ಸೇವಾ ಸೌಲಭ್ಯಗಳು, ಹೆಸ್ಕಾಂ 24ಗಂಟೆ ಸಹಾಯವಾಣಿ 1912, ಎಲ್.ಇ.ಡಿ ದೀಪಗಳ ಬಗ್ಗೆ ಒಳಗೊಂಡ ರೀಂಗ್ ಬ್ಯಾಕ್ ಟೋನ್ನ್ನು ದಿನಾಂಕ: 17.04.2017 ರಿಂದ ಅಳವಡಿಸಿ ಅರಿವು ಮೂಡಿಸಲಾಗುತ್ತಿದೆ
3. ಕೆಪ್ಯಾಸಿಟಿ ಬಿಲ್ಡಿಂಗ್ ಪ್ರೊಗ್ರಾಮ್ (Capacity Building Program): ಸಾಮರ್ಥ್ಯ ನಿರ್ವಹಣಾ ಕಾರ್ಯಕ್ರಮ
• ಈ ಕಾರ್ಯಕ್ರಮಕ್ಕೆ ಅಗಸ್ಟ 29 2018 ರಲ್ಲಿ ಬಿ.ಇ.ಇ, ಕೆ.ಆರ್.ಡಿ.ಎಲ್ ಮತ್ತು ಹೆಸ್ಕಾಂ ನಡುವೆ ಒಪ್ಪಂದವಾಗಿರುತ್ತದೆ. ಈ ಕಾರ್ಯಕ್ರಮದಡಿಯಲ್ಲಿ ಬಿಇಇ ನೀಯೋಜಿಸಿದ ಸಿಐಐ ತಂಡವು ಇಂಧನ ದಕ್ಷತೆ ಮತ್ತು ಡಿ.ಎಸ್.ಎಮ್ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಹೆಸ್ಕಾಂ ಅಧಿಕಾರಿಗಳಿಗೆ ನೀಡಲಾಯಿತು.
• ಸಿಐಐ ಅವರು 5 ದಿನಗಳ ಮಾಸ್ಟರ್ ಟ್ರೆನರ್ಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ 15.01.2019 ರಿಂದ 19.01.2019 ರ ವರೆಗೆ ಹುಬ್ಬಳ್ಳಿಯ ನವೀನ ಹೋಟೆಲ್ ನಲ್ಲಿ ನಡೆಸಿದರು, ಈ ತರಬೇತಿಯಲ್ಲಿ 43 ಹೆಸ್ಕಾಂನ ಅಧಿಕಾರಿಗಳು ಭಾಗವಹಿಸಿದ್ದರು.
• 3 ದಿನಗಳ ವೃತ್ತವಾರು ತರಬೇತಿ ಕಾರ್ಯಕ್ರಮವನ್ನು (ಬಾಗಲಕೋಟ ಮತ್ತು ವಿಜಯಪುರ ವೃತ್ತ) ದಿನಾಂಕ 05.12.2019 ರಿಂದ 07.12.2019ರ ವರೆಗೆ ಬಾಗಲಕೋಟನ ಕ್ಲರ್ಕ ಇನ್ನ್ ಹೋಟೆಲ್ನಲ್ಲಿ ನಡೆಸಿದರು, ಈ ತರಬೇತಿಯಲ್ಲಿ 34 ಹೆಸ್ಕಾಂನ ಅಧಿಕಾರಿಗಳು ಭಾಗವಹಿಸಿದ್ದರು.
• 3 ದಿನಗಳ ವೃತ್ತವಾರು ತರಬೇತಿ ಕಾರ್ಯಕ್ರಮವನ್ನು (ಬೆಳಗಾವಿ ಮತ್ತು ಚಿಕ್ಕೋಡಿ ವೃತ್ತ) ದಿನಾಂಕ 09.12.2019 ರಿಂದ 11.12.2019ರ ವರೆಗೆ ಬೆಳಗಾವಿನ ಚಾನ್ಸರಿ ಹೋಟೆಲ್ನಲ್ಲಿ ನಡೆಸಿದರು, ಈ ತರಬೇತಿಯಲ್ಲಿ 36 ಹೆಸ್ಕಾಂನ ಅಧಿಕಾರಿಗಳು ಭಾಗವಹಿಸಿದ್ದರು
• ಕೆಪ್ಯಾಸಿಟಿ ಬಿಲ್ಡಿಂಗ್ ಪ್ರೊಗ್ರಾಮ್ ಸಾಮರ್ಥ್ಯ ನಿರ್ವಹಣಾ ಕಾರ್ಯಕ್ರಮದಡಿಯಲ್ಲಿ ಬರುವ ಚಟುವಟಿಕೆಗಳು ಹೆಸ್ಕಾಂನ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಲೋಡ್ ಅನ್ನು ಗರಿಷ್ಠ ಬೇಡಿಕೆಯಿಂದ ನೇರ ಬೇಡಿಕೆಯ ಅವಧಿಗೆ ವರ್ಗಾಯಿಸುವುದು, ದಿನದ ಸಮಯದ ಆಧಾರದ ಮೇಲೆ ವಿಭಿನ್ನ ದರಗಳನ್ನು ಹೊಂದಲು, ಹಾಗೂ ವೆಚ್ಚ ಪರಿಣಾಮಕಾರಿ ಕಾರ್ಯ್ಯತಂತ್ರಗಳ ಮೂಲಕ ಇಂಧನ ದಕ್ಷತೆಯನ್ನು ಸುಧಾರಿಸಲು ಸೇರಿದಂತೆ ಡಿಎಸ್ಎಂ ಕ್ರಿಯಾ ಯೋಜನೆಯನ್ನು ಕಾರ್ಯ್ಯಗತಗೊಳಿಸಲು ಹೆಸ್ಕಾಂಗೆ ಅನುವು ಮಾಡಿಕೊಡುತ್ತದೆ.
4. ಪತ್ರಿಕಾ ಮಾಧ್ಯಮ: ವಿಶೇಷ ದಿನಗಳಲ್ಲಿ ದಿನ ಪತ್ರಿಕೆಗಳಲ್ಲಿ ವಿದ್ಯುತ್ ಬಳಕೆಯಲ್ಲಿ ಉಳಿತಾಯದ ಕ್ರಮಗಳು, ಎಲ್.ಇ.ಡಿ. ಬಳಕೆಯ ಪ್ರಯೋಜನಗಳು, ಸುರಕ್ಷತೆಯ ಸಲಹೆಗಳು, ಸೌರಶಕ್ತಿ ಉತ್ಪಾದನೆಗಾಗಿ ಜಾಗೃತಿಗಳನ್ನು ಜಾಹೀರಾತು ನೀಡುವುದರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
5. ರೇಡಿಯೋ ಮಾಧ್ಯಮ: ಇಂಧನ ಉಳಿತಾಯ, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು ಬಿಲ್ ಪಾವತಿ, ಸುರಕ್ಷತಾ ಕಾರ್ಯ್ಯವಿಧಾನಗಳು ಮತ್ತು ಹೆಸ್ಕಾಂ ಸೇವೆಗಳ ಬಗ್ಗೆ ಜಾಗೃತಿ, ಸೋಲಾರ್ ಮೇಲ್ಛಾವಣಿ ಪಿವಿ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು ಇತ್ಯಾದಿಗಳ ಕುರಿತು ಜಿಂಗಲ್ಸ್ ಮತ್ತು ಕಾರ್ಯ್ಯಕ್ರಮದ ಮೂಲಕ. ಆಲ್ ಇಂಡಿಯಾ ರೇಡಿಯೊದ ಪ್ರೈಮರಿ ಚಾನೆಲ್ನಲ್ಲಿ ಪ್ರಸಾರ (01.12.2017 ರಿಂದ 31.03.2018 ರವರೆಗೆ) (16.07.2019 ರಿಂದ 31.03.2020 ರವರೆಗೆ) ಮತ್ತು (16.07.2020 ರಿಂದ 31.03.2021 ರವರೆಗೆ)
6. ಹೆಸ್ಕಾಂ ಕ್ಯಾಲೆಂಡರ್: ಹೆಸ್ಕಾಂ ಕ್ಯಾಲೆಂಡರ್-2018, 2019, 2020ರ ಮುಖಾಂತರ ವಿದ್ಯುತ್ ಉಪಯುಕ್ತ ಮಾಹಿತಿ, ಹೆಸ್ಕಾಂನ ಯೋಜನೆ, ವಿದ್ಯುತ್ ಉಳಿತಾಯದ ಕ್ರಮಗಳು, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು, ಸೌರಶಕ್ತಿ ಉತ್ಪಾದನೆಗಾಗಿ ಜಾಗೃತಿ, ಹೆಸ್ಕಾಂ 24 ಗಂಟೆ ಸಹಾಯವಾಣಿ 1912, ಹೆಸ್ಕಾಂ ಸೇವೆಗಳು ಇತ್ಯಾದಿಗಳ ಬಗ್ಗೆ ಪ್ರಚಾರ ಮಾಡಲಾಗಿದೆ.
7. ಶೈಕ್ಷಣಿಕ / ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ಇಂಧನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸಲು ಶೈಕ್ಷಣಿಕ / ಶಿಕ್ಷಣ ಸಂಸ್ಥೆಗಳೊಂದಿಗೆ ಎನ್ಜಿಒ-ದೇಶಪಾಂಡೆ ಶಿಕ್ಷಣ ಟ್ರಸ್ಟ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
8. ಹೆಸ್ಕಾಂ ಡಿಎಸ್ಎಮ್ / ಎನರ್ಜಿ ದಕ್ಷತೆಯ ಕಾರ್ಯಕ್ರಮಗಳ ಅಡಿಯಲ್ಲಿ ಇತರ ಎಸ್ಕಾಂ ಗಳು ಎಂ.ಎನ್.ಆರ್.ಇ, ಎಸ್ಇಸಿಐ, ಕೆ.ಆರ್.ಡಿ.ಎಲ್ ಮತ್ತು ಇಂಧನ ಇಲಾಖೆಯೊಂದಿಗೆ ಸಂಯೋಜಿಸುತ್ತದೆ.
ಡಿ ಎಸ್ ಎಮ್ ಶಾಖೆಯಿಂದ ವರ್ಷವಾರು ಗ್ರಾಹಕರಲ್ಲಿ ಈ ಕೆಳಕಂಡ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಲಾದ ಕಾರ್ಯಗಳ ವಿವರಗಳು.
• ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು,
• ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದು,
• ಸೋಲಾರ್ ಮೇಲ್ಛಾವಣಿ ಪಿವಿ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು ಮತ್ತು ಹೆಸ್ಕಾಂ ಸೇವೆಗಳ ಬಗ್ಗೆ ಜಾಗೃತಿ,
• ಬೀದಿ ದೀಪಗಳಿಗೆ ಕಡ್ಡಾಯವಾಗಿ ಎಲ್ ಇ ಡಿ ದೀಪ/ದಕ್ಷ ಇಂಧನ ದೀಪಗಳಾದ ಇಂಡಕ್ಷನ್ ಲ್ಯಾಂಪಗಳನ್ನು ಹಾಗೂ ಟೈಮರ್ ಸ್ವಿಚ್ಗಳನ್ನು ಅಳವಡಿಸುವುದು,
• ನೀರಾವರಿ ಪಂಪಸೆಟ್ಗಳಿಗೆ ಕಡ್ಡಾಯವಾಗಿ ಹೆಚ್ಚಿನ ಕಾರ್ಯಕ್ಷಮತೆಯುಳ್ಳ (Energy Efficient) 5 ಸ್ಟಾರ್ ರೇಟೆಡ್ ಪಂಪ್ಗಳನ್ನೇ ಅಳವಡಿಸುವುದು,
• ಇಂಧನ ಉಳಿತಾಯ, ಸುರಕ್ಷತಾ ಕಾರ್ಯವಿಧಾನಗಳು ಡಿಎಸ್ಎಂ ಸಲಹೆಗಳು, ಇಂಧನ ದಕ್ಷತೆಯ ವಿಧಾನಗಳು, ಇತರೆ.
• ಸಹಾಯವಾಣಿ ಸಂಖ್ಯೆ 1912.
ಆರ್ಥಿಕ ವರ್ಷ 2018-19
1. ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ ಉತ್ಸವ – ಮೆಲಂಜೆ : ಈ ಉತ್ಸವವು ದಿನಾಂಕ 5– 6 ಎಪ್ರೀಲ್ 2018 ರಂದು ಎಸ್ ಕೆ ಎಸ್ ವಿ ಎಮ್ ಅಂಗಡಿ ಕಾಲೇಜು ಲಕ್ಷ್ಮೇಶ್ವರ ನಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು.
2. 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ:
• ದಿನಾಂಕ 04.01.2019 ರಿಂದ 06.01.2019ರ ವರೆಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು.
• ಸಮ್ಮೇಳನದಲ್ಲಿ ‘ವಿದ್ಯುತ್ ಉಳಿತಾಯದ’ ಘೋಷಣಾ ಇರುವ ಟಿ-ಶರ್ಟಗಳನ್ನು ಸ್ವಯಂ ಸೇವಕರಿಗೆ ವಿತರಿಸುವ ಮೂಲಕ ‘ಡಿ.ಎಸ್.ಎಮ್’ ಕಾರ್ಯಕ್ರಮ’ ಮಾಡಲಾಯಿತು
3. ವಿದ್ಯುತ್ ಉಳಿತಾಯ ಸಮರ:
ದೇಶಪಾಂಡೆ ಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ ಮತ್ತು ಹೆಸ್ಕಾಮ್ನ ಜಂಟಿ ಸಹಯೋಗದಡಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಇಂಧನ ಸಂರಕ್ಷಣೆ, ಸುರಕ್ಷತೆ ಇತ್ಯಾದಿಗಳ ಬಗ್ಗೆ ಜಾಗೃತಿ / ಶಿಕ್ಷಣ ಕಾರ್ಯ್ಯಕ್ರಮಗಳನ್ನು ಗ್ರಾಮೀಣ, ಅರೆ ನಗರ ಮತ್ತು ನಗರ ಯುವಕರಿಗೆ, ಕೈಗೊಳ್ಳಲಾಯಿತು.
• DSM-Life Skill for students: ಈ ಕಾರ್ಯಕ್ರಮದಲ್ಲಿ 231 ಐಟಿಐ ಕಾಲೇಜಿನಲ್ಲಿ ಜಾಗೃತಿ ಕಾರ್ಯ್ಯಕ್ರಮಗಳನ್ನು ನಡೆಸಲಾಯಿತು.
• ವಿದ್ಯುತ್ ಉಳಿತಾಯ ಸಮರ ರಸ ಪ್ರಶ್ನೆ: ಈ ಕಾರ್ಯಕ್ರಮದಲ್ಲಿ ವಿವಿಧ ಐಟಿಐ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.
ಆರ್ಥಿಕ ವರ್ಷ 2019-20
1. ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ ಉತ್ಸವ – ಮೆಲಂಜೆ : ಈ ಉತ್ಸವವು ದಿನಾಂಕ 26 – 27 ಎಪ್ರೀಲ್ 2019 ರಂದು ಎಸ್ ಕೆ ಎಸ್ ವಿ ಎಮ್ ಅಂಗಡಿ ಕಾಲೇಜು ಲಕ್ಷ್ಮೇಶ್ವರ ನಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು, ಈ ಕಾರ್ಯಕ್ರಮದಲ್ಲಿ 4000 ವಿಧ್ಯಾರ್ಥಿಗಳು ಭಾಗವಹಿಸಿದರು.
2. ವಿಜಯವಾಣಿ ಪ್ರಾಪರ್ಟಿ ಎಕ್ಸ್ಪೋ 2019 : ಮೇ 03 ರಿಂದ 05 ರ ವರೆಗೆ ಹುಬ್ಬಳ್ಳಿಯ ರಾಯ್ಕರ್ ಮೈದಾನದಲ್ಲಿ ನಡೆಯಿತು. ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು, ಈ ಕಾರ್ಯಕ್ರಮಕ್ಕೆ ಸುಮಾರು 50,000 ಜನ ಭೇಟಿ ಮಾಡಿದ್ದರು.
3. ಮಾಸಿಕ ಬಿಲ್ ಜೊತೆ ಕರಪತ್ರಗಳ ವಿತರಣೆ: 20,00,000 ಕರಪತ್ರಗಳನ್ನು ಜೂನ್ 2019 ರಿಂದ ಮಾಸಿಕ ಬಿಲ್ ಜೊತೆ ಎಲ್ಲಾ ಗ್ರಾಹಕರಿಗೆ ವಿತರಿಸಲಾಯಿತು, ಕರಪತ್ರಗಳಲ್ಲಿ ವಿದ್ಯುತ್ ಬಳಕೆಯಲ್ಲಿ ಉಳಿತಾಯದ ಕ್ರಮಗಳು, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು, ಸುರಕ್ಷತೆಯ ಸಲಹೆಗಳು, ಸೌರಶಕ್ತಿ ಬಳಸುವುದು, ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
4. ಹೆಸ್ಕಾಂನ ಪ್ರತಿ ಶಾಖೆಯಲ್ಲಿ ಗ್ರಾಹಕ/ ಸಾರ್ವಜನಿಕ ಜಾಗೃತಿ ಸಭೆ: (ಜುಲೈ 2019- ಅಗಸ್ಟ್ 2019) ಹೆಸ್ಕಾಂನ 246 ಶಾಖೆಯ ಸಾರ್ವಜನಿಕ ಸ್ಥಳದಲ್ಲಿ ಕಾರ್ಯ್ಯಕ್ರಮಗಳನ್ನು ನಡೆಸುವುದರ ಮೂಲಕ ಗ್ರಾಹಕ / ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. 23000 ಜನ ಭಾಗವಹಿಸಿದರು.
5. ಹೆಸ್ಕಾಂನ ಪ್ರತಿ ಶಾಖೆಯಲ್ಲಿ ಗ್ರಾಹಕ/ ಸಾರ್ವಜನಿಕ ಜಾಗೃತಿ ಸಭೆ: (ಫೆಬ್ರವರಿ 2020) ಹೆಸ್ಕಾಂನ 201 ಶಾಖೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾರ್ಯ್ಯಕ್ರಮಗಳನ್ನು ನಡೆಸುವುದರ ಮೂಲಕ ಗ್ರಾಹಕ / ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. 15000 ಜನ ಭಾಗವಹಿಸಿದರು.
6. PARSEC 2020: ದಿನಾಂಕ 15.02.2020 ರಿಂದ 16.02.2020 ರ ವರೆಗೆ ಐಐಟಿ ಕ್ಯಾಂಪಸ್, ಧಾರವಾಡದಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು.
7. Festival of Wrestling : ದಿನಾಂಕ 22.02.2020 ರಿಂದ 25.02.2020 ರ ವರೆಗೆ ಕೆ ಸಿ ಡಿ ಮೈದಾನ, ಧಾರವಾಡದಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಸುಮಾರು 50,000-60,000 ಜನ ಭೇಟಿ ಮಾಡಿದ್ದರು.
ಆರ್ಥಿಕ ವರ್ಷ 2020-21ರ ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಮ್) ಶಾಖೆಯ ಜಾಗೃತಿ ಕಾರ್ಯಕ್ರಮಗಳು:
1. ಹೆಸ್ಕಾಂನ ಎಲ್ಲ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ ರೀಂಗ್ ಬ್ಯಾಕ್ ಟೋನ್: ಹೆಸ್ಕಾಂನ ಎಲ್ಲಾ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ, ಹೆಸ್ಕಾಂನ ಸೇವಾ ಸೌಲಭ್ಯಗಳು, ಬಿಇಇ ಪ್ರಮಾಣೀಕರಿಸಿದ 5-ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು. ಹೆಸ್ಕಾಂ 24ಗಂಟೆ ಸಹಾಯವಾಣಿ 1912, ಎಲ್.ಇ.ಡಿ ದೀಪಗಳ ಪ್ರಯೋಜನೆಗಳ ಬಗ್ಗೆ ಒಳಗೊಂಡ ರೀಂಗ್ ಬ್ಯಾಕ್ ಟೋನ್ನ್ನು ಎಲ್ಲಾ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ ಒದಗಿಸಲಾಗಿದೆ.
2. ಆಲ್ ಇಂಡಿಯಾ ರೇಡಿಯೋ: ಇಂಧನ ಉಳಿತಾಯ, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು, ಸೋಲಾರ್ ಮೇಲ್ಛಾವಣಿ ಪಿವಿ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು, ರೈತರ ಕೃ ಷಿ ನೀರಾವರಿ ಪಂಪ್ ಸೆಟ್ ಗಳಿಗೆ ಬಿಇಇ ಪ್ರಮಾಣೀಕರಿಸಿದ 4 ಅಥವಾ 5 ಸ್ಟಾರ್ ರೇಟೆಡ್ ಪಂಪ್ ಅಳವಡಿಸುವುದು, ಸೌರಶಕ್ತಿ ಬಳಸುವ ಬಗ್ಗೆ ಜಾಗೃತಿ, ಡಿಎಸ್ಎಂ ಸಲಹೆಗಳು, ಸುರಕ್ಷತೆಯ ಸಲಹೆಗಳು, ಬಿಲ್ ಪಾವತಿ, ಕೃಷಿ ಬಳಕೆಗೆ ಸಲಹೆ, ಸಹಾಯ ವಾಣಿ ಸಂಖ್ಯೆ 1912, ಇತ್ಯಾದಿಗಳ ಕುರಿತು ಜಿಂಗಲ್ಸ್ ಪ್ರೈಮರಿ ಚಾನೆಲ್ನಲ್ಲಿ ಪ್ರಸಾರ
3. ವಿದ್ಯುತ್ ಬಳಕೆಯಲ್ಲಿ ಉಳಿತಾಯದ ಕ್ರಮಗಳು, ಎಲ್.ಇ.ಡಿ. ಬಳಕೆಯ ಪ್ರಯೋಜನಗಳು, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದು, ಸೌರಶಕ್ತಿ ಬಳಸುವ ಬಗ್ಗೆ ಜಾಗೃತಿ, ಸಹಾಯವಾಣಿ ಸಂಖ್ಯೆ 1912 ಬಗ್ಗೆ, ಸುರಕ್ಷತೆಯ ಸಲಹೆಗಳು, ಜಾಗೃತಿಯನ್ನು ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಆರ್ಥಿಕ ವರ್ಷ 2021-22ರ ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಮ್) ಶಾಖೆಯ ಜಾಗೃತಿ ಕಾರ್ಯಕ್ರಮಗಳು:
1. ಹೆಸ್ಕಾಂನ ಎಲ್ಲ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ ರೀಂಗ್ ಬ್ಯಾಕ್ ಟೋನ್: ಹೆಸ್ಕಾಂನ ಎಲ್ಲಾ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ, ಹೆಸ್ಕಾಂನ ಸೇವಾ ಸೌಲಭ್ಯಗಳು, ಬಿಇಇ ಪ್ರಮಾಣೀಕರಿಸಿದ 5-ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು. ಹೆಸ್ಕಾಂ 24ಗಂಟೆ ಸಹಾಯವಾಣಿ 1912, ಎಲ್.ಇ.ಡಿ ದೀಪಗಳ ಪ್ರಯೋಜನೆಗಳ ಬಗ್ಗೆ ಒಳಗೊಂಡ ರೀಂಗ್ ಬ್ಯಾಕ್ ಟೋನ್ನ್ನು ಎಲ್ಲಾ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ ಒದಗಿಸಲಾಗಿದೆ.
2. ಆಲ್ ಇಂಡಿಯಾ ರೇಡಿಯೋ: ಇಂಧನ ಉಳಿತಾಯ, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು, ಸೋಲಾರ್ ಮೇಲ್ಛಾವಣಿ ಪಿವಿ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು, ರೈತರ ಕೃ ಷಿ ನೀರಾವರಿ ಪಂಪ್ ಸೆಟ್ ಗಳಿಗೆ ಬಿಇಇ ಪ್ರಮಾಣೀಕರಿಸಿದ 4 ಅಥವಾ 5 ಸ್ಟಾರ್ ರೇಟೆಡ್ ಪಂಪ್ ಅಳವಡಿಸುವುದು, ಸೌರಶಕ್ತಿ ಬಳಸುವ ಬಗ್ಗೆ ಜಾಗೃತಿ, ಡಿಎಸ್ಎಂ ಸಲಹೆಗಳು, ಸುರಕ್ಷತೆಯ ಸಲಹೆಗಳು, ಬಿಲ್ ಪಾವತಿ, ಕೃಷಿ ಬಳಕೆಗೆ ಸಲಹೆ, ಸಹಾಯ ವಾಣಿ ಸಂಖ್ಯೆ 1912, ಇತ್ಯಾದಿಗಳ ಕುರಿತು ಜಿಂಗಲ್ಸ್ ಪ್ರೈಮರಿ ಚಾನೆಲ್ನಲ್ಲಿ ಪ್ರಸಾರ
3. ವಿದ್ಯುತ್ ಬಳಕೆಯಲ್ಲಿ ಉಳಿತಾಯದ ಕ್ರಮಗಳು, ಎಲ್.ಇ.ಡಿ. ಬಳಕೆಯ ಪ್ರಯೋಜನಗಳು, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದು, ಸೌರಶಕ್ತಿ ಬಳಸುವ ಬಗ್ಗೆ ಜಾಗೃತಿ, ಸಹಾಯವಾಣಿ ಸಂಖ್ಯೆ 1912 ಬಗ್ಗೆ, ಸುರಕ್ಷತೆಯ ಸಲಹೆಗಳು, ಜಾಗೃತಿಯನ್ನು ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಸೌರ ಮೇಲ್ಛಾವಣಿ ಯೋಜನೆ: ನವೀಕರಿಸಬಹುದಾದ ಇಂಧನವಾದ ಸೌರ ವಿದ್ಯುತ್ ಉತ್ಪಾದನೆಗೆ ಕರ್ನಾಟಕ ಸರ್ಕಾರದಿಂದ ಸೋಲಾರ್ ನೀತಿ 2022-27 ಅನ್ನು ದಿನಾಂಕ: 30.04.2022 ರಂದು ಜಾರಿಗೆಗೊಳಿಸಲಾಗಿರುತ್ತದೆ. ಸದರಿ ನೀತಿಯಲ್ಲಿ 1GW ಸೋಲಾರ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ನಿಗದಿ ಪಡಿಸಿದ್ದು, ಗೃಹಬಳಕೆ, ಕೈಗಾರಿಕಾ, ವಾಣಿಜ್ಯ ಮತ್ತು ಇತರೆ ಗ್ರಾಹಕರು ನೆಟ್ ಅಥವಾ ಗ್ರಾಸ್ ಮೀಟರಿಂಗ್ ವ್ಯವಸ್ಥೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಹುವಿಸಕಂಪನಿ ಸೌರ ಮೇಲ್ಛಾವಣಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಗ್ರಾಹಕರು ಸೋಲಾರ್ನಿಂದ ಉತ್ಪಾದಿಸಿರುವ ವಿದ್ಯುತ್ ನ್ನು ನೆಟ್ ಮೀಟರಿಂಗ್ ವ್ಯವಸ್ಥೆಯಲ್ಲಿ ಸ್ವಂತ ಬಳಕೆಯ ನಂತರ ಉಳಿದ ವಿದ್ಯುತ್ ನ್ನು ಹಾಗೂ ಗ್ರಾಸ್ ಮೀಟರಿಂಗ್ ವ್ಯವಸ್ಥೆಯಲ್ಲಿ ಉತ್ಪಾದಿಸಿರುವ ಸಂಪೂರ್ಣ ವಿದ್ಯುತ್ ನ್ನು ವಿದ್ಯುತ್ ವಿತರಣಾ ಕಂಪನಿಗಳಿಗೆ ಮಾನ್ಯ ಕೆ.ಇ.ಆರ್.ಸಿರವರು ನಿಗದಿಪಡಿಸಿರುವ ದರದಲ್ಲಿ ಮಾರಾಟ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಒಟ್ಟು ಏಪ್ರಿಲ್-2025 ರ ವರೆಗೆ 5364 ಸಂಖ್ಯೆಗಳ ಸೌರ ಘಟಕಗಳು 106.25 ಮೆ.ವ್ಯಾಟ್ ಸಾಮರ್ಥ್ಯದ ಸೌರ ಫಲಕಗಳನ್ನು ಹುವಿಸಕಂಪನಿಯ ವಿದ್ಯುತ ಜಾಲಕ್ಕೆ ಸಂಪರ್ಕಗೊಳಿಸಲಾಗಿದೆ.
ಸೌರ ಮೇಲ್ಛಾವಣಿ ಯೋಜನೆ ಹಂತ -2:
- ಸೌರ ಮೇಲ್ಛಾವಣಿ ಯೋಜನೆ ಹಂತ -2 MNRE ಯ ಸಬ್ಸಿಡಿ ಯೋಜನೆಯಾಗಿದ್ದು ನೆಟ್ ಮೀಟರಿಂಗ್ ಆಧಾರದಲ್ಲಿ ವಸತಿ ಗ್ರಾಹಕರಿಗೆ ಮತ್ತು ಗುಂಪು ವಸತಿ ಸಮೂದಾಯ (GHS)/ ವಸತಿಕಲ್ಯಾಣ ಸಂಘದ( RWA) ಗ್ರಾಹಕರಿಗೆ.
- ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಎರಡು ಕಾರ್ಯವಿಧಾನಗಳಿವೆ, ಹೆಸ್ಕಾಂ ಪೋರ್ಟಲ್ ಮತ್ತು ರಾಷ್ಟ್ರೀಯ ಪೋರ್ಟಲ್ ಮೂಲಕ, ಹೆಸ್ಕಾಂ ಪೋರ್ಟಲ್ನ ವೆಂಡರ್ಗಳನ್ನು ಟೆಂಡರ್ ಪ್ರಕ್ರಿಯೆಯ ಮೂಲಕ ಎಂಪನೆಲ್ ಮಾಡಲಾಗಿದೆ ಮತ್ತು ರಾಷ್ಟ್ರೀಯ ಪೋರ್ಟಲ್ನ ವೆಂಡರ್ಗಳನ್ನು ಎಮ್. ಎನ್. ಆರ್. ಇ ಯ ಮಾರ್ಗಸೂಚಿಗಳ ಪ್ರಕಾರ ನೇರ ಕಾರ್ಯವಿಧಾನದ ಮೂಲಕ ಎಂಪನೆಲ್ ಮಾಡಲಾಗಿದೆ. ಟೆಂಡರ್ ಮೂಲಕ ಎಂಪನೆಲ್ ಆದ ವೆಂಡರ್ ಗಳ ಮೂಲಕ ಕೆಲಸವನ್ನು ನಿರ್ವಹಿಸುವ ಕಾರ್ಯವಿಧಾನವು 23.01.2024 ರಂದು ಮುಕ್ತಾಯಗೊಂಡಿದೆ. ರಾಷ್ಟ್ರೀಯ ಪೋರ್ಟಲ್ (ನೇರ ಎಂಪನೆಲ್ಡ್ ವೆಂಡರ್) ಮೂಲಕ ಅರ್ಜಿಯನ್ನು ಪ್ರಕ್ರಿಯೆಗೊಳಿಸುವ ವಿಧಾನ ಮುಂದುವರೆದಿದೆ.
- ಸಹಾಯಧನದ ವಿವರ 05.01.2024ರ ವರೆಗೆ –
ವಸತಿ ಗ್ರಾಹಕರಿಗೆ:
1- 3 ಕಿ.ವ್ಯಾಟ್ –ರೂ 14588/- ಪ್ರತಿ ಕಿ.ವ್ಯಾಟ್ ಗೆ
3 ಕಿ.ವ್ಯಾಟ್ ಮೇಲ್ಪಟ್ಟು - 10 ಕಿ.ವ್ಯಾಟ್ ವರೆಗೆ –ರೂ 7294/- ಪ್ರತಿ ಕಿ.ವ್ಯಾಟ್ ಗೆ
- ಸಹಾಯಧನದ ವಿವರ 05.01.2024 – 12.02.2024ರ ವರೆಗೆ
ವಸತಿ ಗ್ರಾಹಕರಿಗೆ:
1-3 ಕಿ.ವ್ಯಾಟ್ –ರೂ 18000/- ಪ್ರತಿ ಕಿ.ವ್ಯಾಟ್ ಗೆ
3 ಕಿ.ವ್ಯಾಟ್ ಮೇಲ್ಪಟ್ಟು - 10 ಕಿ.ವ್ಯಾಟ್ ವರೆಗೆ –ರೂ 9000/- ಪ್ರತಿ ಕಿ.ವ್ಯಾಟ್ ಗೆ
ವಸತಿ ಮತ್ತು ಗುಂಪು ವಸತಿ ಸಮೂದಾಯ (GHS)/ ವಸತಿಕಲ್ಯಾಣ ಸಂಘದ(RWA) ಗ್ರಾಹಕರಿಗೆ
ಸಾಮಾನ್ಯ ಸೌಲಭ್ಯಗಳಿಗಾಗಿ 500KW(@ 10KW ವರೆಗೆ ಪ್ರತಿ ಮನೆಗೆ)
ರೂ 9000/- ಪ್ರತಿ ಕಿ.ವ್ಯಾಟ್ ಗೆ
- ಇಲ್ಲಿಯವರೆಗೆ ಒಟ್ಟು 473 ವೆಂಡರ್ಗಳು ರಾಷ್ಟ್ರೀಯ ಪೋರ್ಟಲ್ನಲ್ಲಿ ನೋಂದಾಯಿಸಲಾಗಿದೆ.
ಪಿ.ಎಂ. ಸೂರ್ಯ ಘರ್:
- ಪಿ.ಎಂ. ಸೂರ್ಯ ಘರ್ ಯೋಜನೆಯನ್ನು ಘನ ಭಾರತ ಸರ್ಕಾರವು 13-02-2024 ರಂದು ಪ್ರಾರಂಭಿಸಿತದೆ.
- ಈ ಯೋಜನೆಯು ಸೌರ ಮೇಲ್ಛಾವಣಿ ಸಾಮರ್ಥ್ಯದ ಪಾಲನ್ನು ಹೆಚ್ಚಿಸಲು ಮತ್ತು ತಮ್ಮ ಸ್ವಂತ ವಿದ್ಯುತ್ ಉತ್ಪಾದಿಸಲು ವಸತಿ ಮನೆಗಳನ್ನು ಸಬಲೀಕರಣಗೊಳಿಸಲು, ಒಂದು ಕೋಟಿ ಮನೆಗಳಲ್ಲಿ ಮೇಲ್ಛಾವಣಿಯ ಸೌರ ಸ್ಥಾವರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ
- ಈ ಯೋಜನೆಯು FY 2026-27 ರವರೆಗೆ ಜಾರಿಯಲ್ಲಿರುತ್ತದೆ.
- ಸಹಾಯಧನದ ವಿವರ
ವಸತಿ ಗ್ರಾಹಕರಿಗೆ:
2 ಕಿ.ವ್ಯಾಟ್ ವರೆಗೆ – ರೂ 30000/- ಪ್ರತಿ ಕಿ.ವ್ಯಾಟ್ ಗೆ
3 ಕಿ.ವ್ಯಾಟ್ ವರೆಗೆ ಹೆಚ್ಚುವರಿ ಸಾಮರ್ಥ್ಯಕ್ಕಾಗಿ – ರೂ 18000/- ಪ್ರತಿ ಕಿ.ವ್ಯಾಟ್ ಗೆ
ವಸತಿ ಮತ್ತು ಗುಂಪು ವಸತಿ ಸಮೂದಾಯ (GHS)/ ವಸತಿಕಲ್ಯಾಣ ಸಂಘದ(RWA) ಗ್ರಾಹಕರಿಗೆ
ಸಾಮಾನ್ಯ ಸೌಲಭ್ಯಗಳಿಗಾಗಿ EV ಚಾರ್ಜಿಂಗ್ ಸೇರಿದಂತೆ 500KW(@ 3KW ವರೆಗೆ ಪ್ರತಿ ಮನೆಗೆ)
ರೂ 18000/- ಪ್ರತಿ ಕಿ.ವ್ಯಾಟ್ ಗೆ
- ಅರ್ಜಿಯ ಪ್ರಕ್ರಿಯೆಯನ್ನು ಸುಲಭಗೊಳಿಸಲು ಉದಾಹರಣೆಗೆ ಆನ್ಲೈನ್ ಪಾವತಿ ಮತ್ತು ಇ-ಪಿಪಿಎ ಮಾಡಿಕೊಳ್ಳಲು ರಾಷ್ಟ್ರೀಯ ಪೋರ್ಟಲ್ ಅನ್ನು ಹೆಸ್ಕಾಂ ಪೋರ್ಟಲ್ಗೆ ಸಂಯೋಜಿಸಲಾಗಿದೆ.
- ಪಿ.ಎಂ. ಸೂರ್ಯ ಘರ್ ಏಪ್ರಿಲ್-2025 ರ ವರೆಗಿನ ಪ್ರಗತಿ 1462 ಸೌರ ಮೇಲ್ಛಾವಣಿ ಸ್ಥಾವರಗಳು - 5153.039 ಕಿ.ವ್ಯಾಟ್ ಸಾಮರ್ಥ್ಯ.
- ವಿದ್ಯುತ್ ವಿತರಣಾ ಕಂಪನಿಗಳು ಆರ್.ಟಿ.ಎಸ್ ಹಂತ-II ಯೋಜನೆಯಡಿಯಲ್ಲಿ ವರ್ಷವಾರು ಸೌರ ಮೇಲ್ಛಾವಣಿ ಸ್ಥಾವರಗಳ ಪ್ರಗತಿಗೆ ಅನುಗುಣವಾಗಿ ಪ್ರೋತ್ಸಾಹ ಧನವನ್ನು ಪಡೆಯಬಹುದಾಗಿದೆ. ಪ್ರೋತ್ಸಾಹಕ ಧನದ ವಿವರ;
- ಆರ್ಥೀಕ ವರ್ಷ 19-20 ರ ಪ್ರೋತ್ಸಾಹಕ ಧನ ರೂ. 1,29,26,800/-
- ಆರ್ಥೀಕ ವರ್ಷ 20-21 ರ ಪ್ರೋತ್ಸಾಹಕ ಧನ ರೂ. 1,18,11,076/-
- ಆರ್ಥೀಕ ವರ್ಷ 21-22 ರ ಪ್ರೋತ್ಸಾಹಕ ಧನ ರೂ. 2,51,26,272/-
- ಆರ್ಥೀಕ ವರ್ಷ 22-23 ರ ಪ್ರೋತ್ಸಾಹಕ ಧನ ರೂ. 1,28,18,108/-
- ಆರ್ಥೀಕ ವರ್ಷ 23-24 ರ ಪ್ರೋತ್ಸಾಹಕ ಧನ ರೂ. 2,41,03,771/-
- ಸೌರ ಮೇಲ್ಛಾವಣಿ ಏಪ್ರಿಲ್-2025 ರ ಪ್ರಗತಿ ವಿವರ;
|
ವಿವರಗಳು
|
ಸಂಖ್ಯೆ
|
ಸಾಮರ್ಥ್ಯ ಮೆ.ವ್ಯಾ
|
|
ಗ್ರಾಹಕ ವರ್ಗ
|
3125 |
95.5122 |
|
ಐ.ಪಿ.ಡಿ.ಎಸ್
|
233 |
1.824
|
|
13 ನೇ ಹಣಕಾಸು ಆಯೋಗ
|
340
|
2.8835
|
|
RTS Phase-II Subsidy ಯೋಜನೆ
|
204 |
0.8791
|
|
ಪಿಎಂ ಸೂರ್ಯ ಘರ್ ಯೋಜನೆ
|
1462 |
5.1530
|
|
Total
|
5364 |
106.2518
|
ಯೋಜನೆಯ ಜಾಗೃತಿ: ಹೆಸ್ಕಾಂನ ಎಲ್ಲ ಶಾಖೆಗಳಲ್ಲಿ ಸೌರ ಮೇಲ್ಛಾವಣಿ ಯೋಜನೆಯ ಜಾಗೃತಿ ಮೂಡಿಸಲಾಗಿದೆ, ದಿನಪತ್ರಿಕೆಗಳಲ್ಲಿ ಜಾಹಿರಾತು ನೀಡುವುದರ ಮೂಲಕ, ಹೆಸ್ಕಾಂ ಜಾಲತಾಣದಲ್ಲಿ ಮತ್ತು ಹೆಸ್ಕಾಂ ಕಛೇರಿಗಳ ಸೂಚನಾ ಫಲಕಗಳಲ್ಲಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ ಮತ್ತು ಹೆಸ್ಕಾಂನ ಸಾಮಾಜಿಕ ಮಾದ್ಯಮದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ವಿದ್ಯುತ ವಾಹನ ಚಾರ್ಜಿಂಗ್ ಕೇಂದ್ರಗಳು:
- ಹೆಸ್ಕಾಂ ವ್ಯಾಪ್ತಿಯಲ್ಲಿ 64 ಹೆಸ್ಕಾಂ ಕಚೇರಿಗಳು ಸೇರಿದಂತೆ ಒಟ್ಟು 274 ಸರಕಾರಿ ಸ್ಥಳಗಳನ್ನು ಗುರುತಿಸಲಾಗಿದೆ.
- ಬೆಸ್ಕಾಂ ರಾಜ್ಯ ನೋಡಲ್ ಏಜೆನ್ಸಿಯಾಗಿದೆ.
District wise Proposed EV charging Station locations
|
|
SI. No
|
District
|
Total No of Proposed Charging Stations
|
No of proposed charging stations on National Highway
|
Tender Status
|
Agency Name
|
Present Status
|
|
1
|
Dharwad
|
53
|
33
|
Evaluation is under process
|
|
|
|
2
|
Gadag
|
10
|
7
|
Evaluation is under process
|
|
|
|
3
|
Haveri
|
32
|
23
|
LOA issued
|
M/s Maidur Electrical Works, Haveri.
|
Contract Agreement executed and Survey Completed Correspondence has been made for Agreement with Agency to concerned Govt Official in Feb 2024
|
|
4
|
Uttar Kannada
|
28
|
23
|
Evaluation is under process
|
|
|
|
5
|
Belagavi
|
54
|
13
|
LOA issued
|
M/s Bangalore Medical system, Bangalore.
|
Survey under process.
|
|
6
|
Bagalkote
|
63
|
7
|
Evaluation is under process
|
|
|
|
7
|
Vijayapur
|
34
|
22
|
Evaluation is under process
|
|
|
|
Total
|
274
|
128
|
|
- ಕೇಂದ್ರ ಸರ್ಕಾರವು ದಿನಾಂಕ 14.01.2022 ರಂದು EV ಚಾರ್ಜಿಂಗ್ ಸ್ಟೇಷನ್ಗಳ ಕುರಿತು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ, ಅದರ ಪ್ರಕಾರ, ಸರ್ಕಾರ/ಸಾರ್ವಜನಿಕ ಸಂಸ್ಥೆಗಳ ಬಳಿ ಲಭ್ಯವಿರುವ ಭೂಮಿಯನ್ನು ಸರ್ಕಾರ/ಸಾರ್ವಜನಿಕ ಘಟಕಕ್ಕೆ ಆದಾಯ ಹಂಚಿಕೆ ಆಧಾರದ ಮೇಲೆ ಸಾರ್ವಜನಿಕ ಶುಲ್ಕ ವಿಧಿಸುವ ಕೇಂದ್ರವನ್ನು ಸ್ಥಾಪಿಸಲು ಒದಗಿಸಲಾಗುತ್ತದೆ. ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಅನ್ನು ಸ್ಥಾಪಿಸಲು ರೂ.1/KWh (ಚಾರ್ಜ್ ಮಾಡಲು ಬಳಸಲಾಗುತ್ತದೆ) ನಿಗದಿತ ದರದಲ್ಲಿ ಅಂತಹ PCS ನಿಂದ ಭೂ ಮಾಲೀಕತ್ವದ ಏಜೆನ್ಸಿಗೆ ಪಾವತಿಸಬೇಕು.
- ಆರಂಭಿಕ ಹಂತದ ಪ್ರಗತಿಗಾಗಿ 3.3KW AC001 ಚಾರ್ಜರ್ಗಳನ್ನು 12 ಹೆಸ್ಕಾಂ ಕಚೇರಿ ಆವರಣದಲ್ಲಿ ಅಳವಡಿಸಲಾಗಿದೆ.
- ಆರ್ಟಿಒ ಧಾರವಾಡ ಜಿಲ್ಲೆ- ನವನಗರ, ಗಬ್ಬೂರು, ಬೆಳಗಾವಿ, ವಿಜಯಪುರದಲ್ಲಿ ಇವಿ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸಲು ಸರ್ವೆ ಮಾಡಲಾಗಿದೆ ಮತ್ತು ಅಂದಾಜು ಪತ್ರಿಕೆಯನ್ನು ಬೆಸ್ಕಾಂಗೆ ಸಲ್ಲಿಸಲಾಗಿದೆ. ಆರ್ಟಿಒ ಬೆಳಗಾವಿ ಮತ್ತು ವಿಜಯಪುರಕ್ಕೆ ಬೆಸ್ಕಾಂ ಇವಿ ಸೆಲ್ನಿಂದ ಟೆಂಡರ್ ಕರೆಯಲಾಗಿದ್ದು, ಮೌಲ್ಯಮಾಪನ ಪ್ರಕ್ರಿಯೆಯಲ್ಲಿದೆ.
- ಇದಲ್ಲದೆ ಹೆಸ್ಕಾಂ ತನ್ನ ವ್ಯಾಪ್ತಿ ಪ್ರದೇಶದಲ್ಲಿ ಖಾಸಗಿ ಇವಿ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡುತ್ತಿದೆ.
- ಸರ್ಕಾರಿ ಸ್ವಾಮ್ಯದ ಆವರಣದಲ್ಲಿ 2ನೇ ಹಂತದ ವಿದ್ಯುತ್ ವಾಹನ ಚಾರ್ಚಿಂಗ್ ಕೇಂದ್ರಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ(PPP Model) ಮಾದರಿಯಲ್ಲಿ ಸ್ಥಾಪಿಸಲು ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ.
ಪಿ ಎಮ್-ಕುಸುಮ್ ಯೋಜನೆ:
ಭಾರತ ಸರ್ಕಾರವು ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್ A, B ಮತ್ತು C (ಪಿ ಎಮ್- ಕುಸುಮ್) ಯೋಜನೆಯನ್ನು ಆರಂಭಿಸಿದೆ.
ಕಂಪೋನೆಂಟ್ – ಸಿ : ಫೀಡರ್ ಮಟ್ಟದ ಸೌರೀಕರಣ ಸೇರಿದಂತೆ ವೈಯಕ್ತಿಕ ಪಂಪ್ನ 35 ಲಕ್ಷ ಗ್ರಿಡ್- ಸಂಪರ್ಕಿತ ಕೃಷಿ ಪಂಪ್ಗಳ ಸೌರೀಕರಣ.
- ಈ ಘಟಕವು ಫೀಡರ್ ಮಟ್ಟದ ಸೌರೀಕರಣ ಸೇರಿದಂತೆ ಗ್ರಿಡ್ ಸಂಪರ್ಕಿತ ಕೃಷಿ ಪಂಪ್ಗಳ ಸೌರೀಕರಣದ ಗುರಿಯನ್ನು ಹೊಂದಿದೆ.
- ಈ ಘಟಕದ ಉದ್ದೇಶವು ರೈತರಿಗೆ ಹಗಲಿನಲ್ಲಿ ಸೌರಶಕ್ತಿಯನ್ನು ಒದಗಿಸುವುದು, ಹೆಚ್ಚುವರಿ ಸೌರಶಕ್ತಿಯನ್ನು ಖರೀದಿಸುವ ಮೂಲಕ ಅವರ ಆದಾಯವನ್ನು ಹೆಚ್ಚಿಸುವುದು ಮತ್ತು ನೀರನ್ನು ಉಳಿಸಲು ಪ್ರೋತ್ಸಾಹಿಸುವುದು.
- ಫೀಡರ್ಗಳ ಸೌರೀಕರಣ - ಕೃಷಿ ಫೀಡರ್ನ ಸೌರೀಕರಣಕ್ಕಾಗಿ ವಿದ್ಯುತ್ ಉಪ ಕೇಂದ್ರಗಳ ಬಳಿ ಸೌರ ಸ್ಥಾವರದ ಸ್ಥಾಪನೆ. ಫೀಡರ್ ಮಟ್ಟದ ಸೌರ ವಿದ್ಯುತ್ ಸ್ಥಾವರವನ್ನು ಒಂದು ಅಥವಾ ಅನೇಕ ಕೃಷಿ ಫೀಡರ್ಗಳಿಗೆ ವಿತರಣಾ ಉಪಕೇಂದ್ರದ 11 ಕೆವಿ ಅಥವಾ ಹೆಚ್ಚಿನ ವೋಲ್ಟೇಜ್ ಮಟ್ಟದಲ್ಲಿ ವಿದ್ಯುತ್ ಪೂರೈಸಲು ಸ್ಥಾಪಿಸಬಹುದಾಗಿದೆ. ಸೌರ ಸಾಮರ್ಥ್ಯವನ್ನು ಕೃಷಿ ಫೀಡರ್ನ ಹಿಂದಿನ ಎರಡು ಅಥವಾ ಮೂರು ವರ್ಷಗಳ ಬಳಕೆಯ ಸರಾಸರಿ ಬಳಕೆಯ ಆಧಾರದ ಮೇಲೆ 19% ನಷ್ಟು ಕನಿಷ್ಠ ಸಾಮರ್ಥ್ಯದ ಬಳಕೆಯ ಅಂಶವನ್ನು (CUF) ಪರಿಗಣಿಸಿ, ಕೃಷಿ ಫೀಡರ್ನ ವಿತರಣಾ ನಷ್ಟವನ್ನು ಹೊರತುಪಡಿಸಿ, ಪ್ರತಿ IP ಗೆ 7.5 HP ಸಾಮರ್ಥ್ಯದ ಮಿತಿಯ ಅನುಸಾರ ಲೆಕ್ಕಾಚಾರ ಮಾಡಬಹುದಾಗಿದೆ.(Each bay can cater 6.5MW. Solar power will be injected from the solar power plant to 11KV bus)
- ಹೆಸ್ಕಾಂ ದಿನಾಂಕ 21.06.2021 ರಂದು 65,000 IP ಸೆಟ್ಗಳ ಹಂಚಿಕೆಯನ್ನು ಪಡೆದುಕೊಂಡಿದೆ.
- ಮಾನದಂಡದ ವೆಚ್ಚ - 3.5 ಕೋಟಿ/MW
- ಕೇಂದ್ರ ಹಣಕಾಸು ನೆರವು - 30% ಅಂದರೆ 1.05 ಕೋಟಿ/MW
- GOK ಆದೇಶದನ್ವಯ. KREDL ಅನುಷ್ಠಾನ ಸಂಸ್ಥೆಯಾಗಿದೆ.
- Ceiling Tariff ರೂ. 3.17/- ಕೆಇಆರ್ಸಿ ಆದೇಶದ ದಿನಾಂಕ:20.06.2022
- ಈ ಯೋಜನೆಗೆ ಗರಿಷ್ಟ ವಿದ್ಯುತ್ ಬಳಕೆ/ ಗರಿಷ್ಠ ಹೊರೆ ಹಾಗೂ ಗರಿಷ್ಠ ಸಂಖ್ಯೆಯ ನೀರಾವರಿ ಪಂಪ್ ಸೆಟ್ ಗಳನ್ನು ಹೊಂದಿರುವ ಹಾಗೂ 3 ಫೇಸ್ ವಿದ್ಯುತ್ ನ್ನು 7 ಗಂಟೆಗಳ ಕಾಲ ಪೂರೈಸಲು ಕಷ್ಟಕರವಾದಂತಹ ಕೃಷಿ ಫೀಡರ್ ಗಳನ್ನು ಪರಿಗಣಿಸಲಾಗಿದೆ.
- ಹಂತ-I ರಲ್ಲಿ ಕೆ.ಪಿ.ಟಿ.ಸಿ.ಎಲ್. ನಿಂದ ತಾಂತ್ರಿಕ ಕಾರ್ಯಸಾಧ್ಯತೆಯ ಆಧಾರದ ಮೇಲೆ 76 ಉಪ ಕೇಂದ್ರಗಳಿಗೆ 92 ಫೀಡರ್ಗಳನ್ನು ಅಂತಿಮಗೊಳಿಸಲಾಗಿದೆ.
- MNRE ಮಾರ್ಗಸೂಚಿಗಳ ಪ್ರಕಾರ FY 2020-21 ಮತ್ತು FY 2021-22 ರ ಸರಾಸರಿ ಬಳಕೆಯ ಆಧಾರದ ಮೇಲೆ 19% ನ CUF ಅನ್ನು ಪರಿಗಣಿಸಿ, ಕೃಷಿ ಫೀಡರ್ T&D ನಷ್ಟವನ್ನು ಹೊರತುಪಡಿಸಿ ಪ್ರತಿ ನೀರಾವರಿ ಪಂಪ್ ಸೆಟ್ ಗೆ 5 HP ಸಾಮರ್ಥ್ಯದ ಮಿತಿಯೊಂದಿಗೆ ಸೌರ ಸ್ಥಾವರದ ಸಾಮರ್ಥ್ಯ 180.17MW ಲೆಕ್ಕಾಚಾರ ಮಾಡಲಾಗಿದೆ.
- KREDL (SIA) ಹೆಸ್ಕಾಂನ 76 ಸಬ್ಸ್ಟೇಷನ್ಗಳು/92 ಫೀಡರ್ಗಳ ಒಟ್ಟು 65000 IP ಸೆಟ್ಗಳಿಗೆ RESCO Mode ನಲ್ಲಿ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ PM-KUSUM ಯೋಜನೆಯ ಕಾಂಪೊನೆಂಟ್-ಸಿ ಅಡಿಯಲ್ಲಿ ಫೀಡರ್ ಲೆವೆಲ್ ಸೋಲಾರೈಸೇಶನ್ ಅನುಷ್ಠಾನಕ್ಕೆ ಟೆಂಡರ್ ಕರೆದಿದೆ
- 12 ಉಪ-ಕೇಂದ್ರಗಳಿಗೆ (Bid responsive stations). LOA ಅನ್ನು KREDL ನಿಂದ ದಿನಾಂಕ:26.02.2024 ರಂದು ನೀಡಲಾಗಿದೆ
- ಉಳಿದ 64 ಉಪ-ಕೇಂದ್ರಗಳಿಗೆ KREDL ಮರು ಟೆಂಡರ್ ಮಾಡಿದೆ, ಅದರಲ್ಲಿ 36 ವಿತರಣಾ ಕೇಂದ್ರಗಳಿಗೆ LOA ಅನ್ನು KREDL ನಿಂದ ನೀಡಲಾಗಿದೆ.
- ಮತ್ತೊಮ್ಮೆ KPTCL ದಿನಾಂಕ: 10.2024 ರಂದು ನೀಡಿರುವ ಕಾರ್ಯ ಸಾಧ್ಯತೆಯ ಆಧಾರದ ಮೇಲೆ ಮತ್ತು ಸಂಬಂಧಪಟ್ಟ ಕಾರ್ಯಸಾಧ್ಯವಾದ ಉಪಕೇಂದ್ರಗಳಲ್ಲಿ ಕೃಷಿ ಫೀಡರ್ಗಳ ಬಳಕೆಯ ಪ್ರಕಾರ ಹೆಸ್ಕಾಂ ವ್ಯಾಪ್ತಿಯಲ್ಲಿ ಅಳವಡಿಸಬಹುದಾದ ಗರಿಷ್ಠ ಸೌರ ಸಾಮರ್ಥ್ಯದ ವಿವರ ಈ ಕೆಳಗಿನಂತಿದೆ.
| ವಿವರಗಳು |
ಉಪಕೇಂದ್ರ |
ಸಾಮರ್ಥ್ಯ ( MW) |
ಕೃಷಿ ಫೀಡರ್ ಗಳ ಸಂಖ್ಯೆ |
ನೀರಾವರಿ ಪಂಪಸೆಟ್ ಗಳ ಸಂಖ್ಯೆ |
|
ಹಂತ -1 (ಭಾಗ 1,2, 3 KREDLನಿಂದ ಟೆಂಡರ್ ಕರೆಯಲಾಗಿದೆ.)
|
57 |
214.28 |
108 |
64995 |
|
ಹಂತ -2 (ಹೆಸ್ಕಾಂ ನಿಂದ ಟೆಂಡರ್ ಕರೆಯಲಾಗಿದೆ)
|
29 |
201.34 |
126 |
44052 |
| ಒಟ್ಟು |
86 |
415.62 |
234 |
109047 |
- ಹಂತ -1 ಭಾಗ-3 ರಲ್ಲಿ 16 ವಿದ್ಯುತ್ ಉಪಕೇಂದ್ರಗಳಿಗೆ ಕುಸುಮ –ಸಿ ಯೋಜನೆ ಅನುಷ್ಠಾನಗೊಳಿಸಲು KREDL ನಿಂದ ಟೆಂಡರ್ ಕರೆಯಲಾಗಿದೆ.
- ಹಂತ -2 ರಲ್ಲಿ 29 ವಿದ್ಯುತ್ ಉಪಕೇಂದ್ರಗಳಿಗೆ ಕುಸುಮ –ಸಿ ಯೋಜನೆ ಅನುಷ್ಠಾನಗೊಳಿಸಲು HESCOM ನಿಂದ ಟೆಂಡರ್ ಕರೆಯಲಾಗಿದೆ. ದಿನಾಂಕ 21.01.2025 ರಂದು 29 LOA ಗಳನ್ನು ನೀಡಲಾಗಿದೆ.
- ಕುಸುಮ –ಸಿ ಯೋಜನೆಯಡಿ ಕಾರ್ಯ ಪ್ರಗತಿ ಹಂತದಲ್ಲಿರುವ ವಿದ್ಯುತ್ ಉಪಕೇಂದ್ರ ಗಳು – 7 ಹಾಗೂ ಕೆಲಸ ಕೈಗೆತ್ತಿಕೊಳ್ಳ ಬೇಕಾದವು – 45
ಕೆಪ್ಯಾಸಿಟಿ ಬಿಲ್ಡಿಂಗ್ ಪ್ರೊಗ್ರಾಮ್ (Capacity Building Program):
- ಸಾಮರ್ಥ್ಯ ನಿರ್ವಹಣಾ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಅಗಸ್ಟ 29, 2018 ರಲ್ಲಿ ಬಿ.ಇ.ಇ, ಕೆ.ಆರ್.ಡಿ.ಎಲ್ ಮತ್ತು ಹೆಸ್ಕಾಂ ನಡುವೆ ಒಪ್ಪಂದವಾಗಿರುತ್ತದೆ. BEE ಹೆಸ್ಕಾಂಗೆ M/s ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (CII) ಯನ್ನು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ (PMC)) ಆಗಿ ನಿಯೋಜಿಸಿತ್ತು.
- ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮದ ಅಡಿಯಲ್ಲಿ ಒಳಗೊಂಡಿರುವ ಚಟುವಟಿಕೆಗಳು ಹೆಸ್ಕಾಂನ ಸಾಮರ್ಥ್ಯ ವೃದ್ಧಿಗೆ ಸಹಾಯ ಮಾಡುತ್ತದೆ ಮತ್ತು ಗರಿಷ್ಠ ಬೇಡಿಕೆಯಿಂದ ಕನಿಷ್ಟ ಬೇಡಿಕೆಯ ಅವಧಿಗೆ ವಿದ್ಯುತ್ ಹೊರೆಯನ್ನು ವರ್ಗಾಯಿಸುವುದು, ದಿನದ ಸಮಯದ ಆಧಾರದ ಮೇಲೆ ವಿಭಿನ್ನ ದರಗಳನ್ನು ಹೊಂದುವುದು ಸೇರಿದಂತೆ ಡಿಎಸ್ಎಮ್ ಕ್ರಿಯಾ ಯೋಜನೆಯನ್ನು ಕಾರ್ಯಗತಗೊಳಿಸಲು ಹೆಸ್ಕಾಂಗೆ ಅನುವು ಮಾಡಿಕೊಡುತ್ತದೆ.
- ಕೆಪ್ಯಾಸಿಟಿ ಬಿಲ್ಡಿಂಗ್ ಪ್ರೊಗ್ರಾಮ್ ಅಡಿಯಲ್ಲಿ CII ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ;
- ಹೆಸ್ಕಾಂ ಕಾರ್ಪೊರೇಟ್ ಕಛೇರಿಯಲ್ಲಿ ಒಬ್ಬ ತಾಂತ್ರಿಕ ಸಲಹೆಗಾರ ಮತ್ತು ಒಬ್ಬ ಹಣಕಾಸು ಸಲಹೆಗಾರರ ನಿಯೋಜನೆ.
- ಹೆಸ್ಕಾಂನ ಹಿರಿಯ ಅಧಿಕಾರಿಗಳಿಗೆ ತರಬೇತುದಾರರ ಒಂದು ತರಬೇತಿ ಕಾರ್ಯಕ್ರಮ.
- ನಾಲ್ಕು ವೃತ್ತ ಮಟ್ಟದ ತರಬೇತಿ ಕಾರ್ಯಕ್ರಮಗಳು – ಹೆಸ್ಕಾಂನ ವೃತ್ತ ಮಟ್ಟದ ಅಧಿಕಾರಿಗಳಿಗೆ.
- ವಿವಿಧ ವರ್ಗಗಳ ಅಡಿಯಲ್ಲಿ 75 ಫೀಡರ್ಗಳಿಗೆ ಗ್ರಾಹಕರ ಸಮೀಕ್ಷೆ ಮತ್ತು ಲೋಡ್ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ
- ಲೋಡ್ ಸಂಶೋಧನಾ ಅಧ್ಯಯನದ ಆಧಾರದ ಮೇಲೆ ಮುಂದಿನ 3 ವರ್ಷಗಳ DSM ಕ್ರಿಯಾ ಯೋಜನೆಯನ್ನು CII ಈ ಕೆಳಗಿನಂತೆ ಒದಗಿಸಿದೆ.
| Area |
DSM Action |
Year 1 (MW) |
Year 2 (MW) |
Year 3 (MW) |
Total |
| Domestic |
LED Bulb Replacement |
2.593 |
0.000 |
0.000 |
2.593 |
| LED Tube Light Replacement |
22.629 |
15.086 |
0.000 |
37.715 |
| Ceiling Fan Program |
1.400 |
1.400 |
1.867 |
4.668 |
| Air Conditioner Program |
0.396 |
0.594 |
0.990 |
1.980 |
| Solar Water Heater Program |
3.759 |
5.639 |
9.398 |
18.796 |
| Commercial |
LED Bulb Replacement |
0.474 |
0.000 |
0.000 |
0.474 |
| LED Tube Light Replacement |
2.980 |
1.987 |
0.000 |
4.967 |
| Ceiling Fan Program |
0.877 |
0.877 |
1.169 |
2.923 |
| Air Conditioner Program |
0.248 |
0.371 |
0.619 |
1.238 |
| Industrial |
Motor Replacement Program |
7.658 |
7.658 |
10.211 |
25.528 |
| Agriculture |
Energy Efficient Pump Program |
8.938 |
13.407 |
22.345 |
44.690 |
| Total |
Load Reduction |
51.952 |
47.020 |
46.600 |
145.57 |
ಇತರೆ ಮಾಹಿತಿಗಳು :
ಕ್ರಮ ಸಂಖ್ಯೆ
|
ವಿವರಗಳು
|
|
ಗಾತ್ರ
|
ವೀಕ್ಷಿಸಿ/ಡೌನಲೋಡ್
|
| 01 |
ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಂ) ಜಾಗೃತಿ ಕರಪತ್ರ. |
3415 ಕೆಬಿ |
 |
| 02 |
ಪತ್ರಿಕೆಗಳ ಮೂಲಕ ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಂ) ಜಾಗೃತಿ ಜಾಹೀರಾತಿನ ಮಾದರಿಗಳು. |
24769 ಕೆಬಿ |
 |
| 03 |
ಡಿ ಎಸ್ ಎಮ್ ಜಾಗೃತಿ ಕಾರ್ಯಕ್ರಮಗಳ ಚಿತ್ರ ಭಂಡಾರ |
- |
 |
| 04 |
ಡಿ ಎಸ್ ಎಮ್ ಕಾರ್ಯಕ್ರಮದಡಿಯಲ್ಲಿ ಇಂಧನ ಉಳಿತಾಯ, ಸುರಕ್ಷತೆ, ಹೆಸ್ಕಾಂ ಸೇವೆ, ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವ ಜಿಂಗಲ್ಸ್, ಆಕಾಶವಾಣಿ ಧಾರವಾಡ ಪ್ರೈಮರಿ ಚಾನಲ್ ನಲ್ಲಿ ಪ್ರಸಾರ. |
1. ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದು |
587 ಕೆಬಿ |
 |
| 2. ಎಲ್ಇಡಿ ಬಲ್ಬ್ ಗಳನ್ನು ಬಳಸುವ ಕುರಿತು ಜಾಗೃತಿ |
451 ಕೆಬಿ |
 |
| 3. ಐಎಸ್ಐ ಉಪಕರಣಗಳನ್ನು ಬಳಸುವುದು |
536 ಕೆಬಿ |
 |
| 4. ನೈಸರ್ಗಿಕ ಬೆಳಕನ್ನು ಬಳಸಿಕೊಂಡು ವಿದ್ಯುತ್ ಉಳಿತಾಯದ ಸಲಹೆ |
377 ಕೆಬಿ |
 |
| 5. ರೆಫ್ರಿಜರೇಟರ್ ಬಳಕೆಯಲ್ಲಿ ವಿದ್ಯುತ್ ಉಳಿತಾಯದ ಸಲಹೆ |
569 ಕೆಬಿ |
 |
| 6. ವಿದ್ಯುತ್ ಉಳಿತಾಯದ ಸಲಹೆಗಳು |
466 ಕೆಬಿ |
 |
| 7. ಸುರಕ್ಷತೆಯ ಅರಿವು 1 |
494 ಕೆಬಿ |
 |
| 8. ಸುರಕ್ಷತೆಯ ಅರಿವು 2 |
464 ಕೆಬಿ |
 |
| 9. ಸುರಕ್ಷತೆಯ ಅರಿವು 3 |
547 ಕೆಬಿ |
 |
| 10. ಆನ್ಲೈನ್ ಪಾವತಿ |
643 ಕೆಬಿ |
 |