ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಸಹಜ್ ಬಿಜ್ಲಿ ಹರ್ ಘರ್ ಯೋಜನಾ (ಸೌಭಾಗ್ಯ ಯೋಜನೆ)

ಕೇಂದ್ರ ಸರಕಾರವು “ಸೌಭಾಗ್ಯ”- ಪ್ರಧಾನ ಮಂತ್ರಿ ಸಹಜ್ ಬಿಜ್‍ಲಿ ಹರ್ ಘರ್ ಯೋಜನೆಯನ್ನು ಮನೆಗಳ ಸಾರ್ವತ್ರಿಕ ವಿದ್ಯುದೀಕರಣಕ್ಕಾಗಿ ಜಾರಿಗೆ ತಂದಿರುತ್ತದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮೀಣ ವಿದ್ಯುದ್ದೀಕರಣ ನಿಗಮ (ಮೆ!!ಆರ್.ಇ.ಸಿ) ನವದೆಹಲಿಯು ನೋಡಲ್ ಏಜನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.

 

ಮೆ!! ಆರ್.ಇ.ಸಿ ಇವರಿಂದ 91764 ಸಂಖ್ಯೆಯ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರೂ. 40.55 ಕೋಟಿ ಮತ್ತು ರೂ. 53.14 ಕೋಟಿ ಯೋಜನಾ ವೆಚ್ಚಕ್ಕೆ ಜನವರಿ-2019 ಹಾಗೂ ಮಾರ್ಚ್-2019ರಲ್ಲಿ ಮಂಜೂರಾತಿ ದೊರೆತಿರುತ್ತದೆ. ಪ್ರಸ್ತುತ 79,800 ಸಂಖ್ಯೆಯ ಅರ್ಹ ಮನೆಗಳು ವಿದ್ಯುದ್ದೀಕರಣಗೊಂಡಿದ್ದು, ಕಾಮಗಾರಿಯು ಪೂರ್ಣಗೊಂಡಿರುತ್ತದೆ.