ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (ಡಿಡಿಯುಜಿಜೆವೈ)

ಕೇಂದ್ರ ಸರಕಾರವು ಗ್ರಾಮೀಣ ಪ್ರದೇಶಗಳಿಗೆ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸಲು  “ಡಿ.ಡಿ.ಯು.ಜಿ.ಜೆ.ವೈ” ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

 

ಈ ಯೋಜನೆಯು ಕೆಳಕಂಡ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.

 

ಅ) ಉಪ ಪ್ರಸರಣ ಹಾಗೂ ಸರಬರಾಜು ಮಾರ್ಗಗಳನ್ನು ಬಲಪಡಿಸುವುದು ಹಾಗೂ ಉನ್ನತೀಕರಣಗೊಳಿಸುವುದು ಮತ್ತು ಮಾಪಕೀಕರಣ.

ಆ) ಗ್ರಾಮೀಣ ವಿದ್ಯುದ್ದೀಕರಣ.

ಇ) ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಒದಗಿಸುವುದು.

ಈ) ಫೀಡರಗಳನ್ನು ಬೇರ್ಪಡಿಸುವುದು.

ಉ) ಸಂಸದ್ ಆದರ್ಶ ಗ್ರಾಮ ಯೋಜನೆ (SAGY).

 

ಈ ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮೀಣ ವಿದ್ಯುದ್ದೀಕರಣ ನಿಗಮ (ಮೆ||ಆರ್.ಇ.ಸಿ) ನವದೆಹಲಿಯು ನೋಡಲ್ ಏಜನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.

 

ಹು.ವಿ.ಸ.ಕಂ.ನಿ 7 ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟ, ವಿಜಯಪುರ, ಮತ್ತು ಉತ್ತರಕನ್ನಡ ಗಳಿಗೆ ಸಂಬಂಧಿಸಿದಂತೆ ಮೆ|| ಆರ್.ಇ.ಸಿ ಇವರಿಂದ ರೂ. 332.12 ಕೋಟಿ ಯೋಜನಾ ವೆಚ್ಚಕ್ಕೆ ಜುಲೈ-2017ರಲ್ಲಿ ಮಂಜೂರಾತಿ ದೊರೆತಿರುತ್ತದೆ.

 

ಪ್ರಸ್ತುತ, ಹು.ವಿ.ಸ.ಕಂ.ನಿ ವ್ಯಾಪ್ತಿಯ ಎಲ್ಲಾ 30 ಗ್ರಾಮಗಳ ವಿದ್ಯುದ್ದೀಕರಣ, 86633 ಸಂಖ್ಯೆ ಮನೆಗಳ ವಿದ್ಯುದ್ದೀಕರಣ ಕಾಮಗಾರಿಯು ಹಾಗೂ 4,33,299 ಸಂಖ್ಯೆ ಎಲೆಕ್ಟ್ರೋಮೆಕ್ಯಾನಿಕಲ್ / ಹೈ ಪ್ರಿಷಿಷನ್ ಮಾಪಕಗಳನ್ನು ಎಲೆಕ್ಟ್ರೋಸ್ಟ್ಯಾಟಿಕ್ ಮಾಪಕಗಳಿಂದ ಬದಲಿಸುವ ಕಾಮಗಾರಿಯು ಪೂರ್ಣಗೊಂಡಿರುತ್ತದೆ.