ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ದೃಷ್ಟಿಕೋನ ಮತ್ತು ಕಾರ್ಯತಂತ್ರ

ಕಂಪನಿಯು ಈ ಕೆಳಗಿನ ದೃಷ್ಟಿಕೋನ ಮತ್ತು ಕಾರ್ಯತಂತ್ರಗಳನ್ನು ಹಮ್ಮಿಕೊಂಡಿದೆ,


ಕಂದಾಯ ಬೇಡಿಕೆಯ ಹೆಚ್ಚಳ.


ವಿತರಣಾ ನಷ್ಟ ಹಾಗು ನಿರ್ವಹಣೆಯ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿತರಣಾ ಜಾಲವನ್ನು ಬಲಪಡಿಸುವುದು ಹಾಗು ಅಭಿವೃದ್ಧಿಗೊಳಿಸುವುದು.


ನೌಕರರ ಕಾರ್ಯ ಕ್ಷಮತೆಯನ್ನು ಹೆಚ್ಚಿಸುವುದು.


ಗ್ರಾಹಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುವುದು.


ತಪ್ಪಿಸಬಹುದಾದ ನಷ್ಟವನ್ನು ಕಡಿಮೆಗೊಳಿಸಲು ೩೩ ಕೆ ವಿ / ೧೧ ಕೆ ವಿ ಡಿಟಿಸಿ ಗಳ ಹಂತಗಳಲ್ಲಿ ಎನರ್ಜಿ ಆಡಿಟ್ ಮಾಡುವುದು.


ವಿದ್ಯುತ್ ಕಳ್ಳತನ ಹಾಗು ಸೋರಿಕೆಗಳನ್ನು ಕಡಿಮೆಗೊಳಿಸಲು ಜಾಗೃತ ದಳದ ಕಾರ್ಯಾಚರಣೆಗಳನ್ನು ಹೆಚ್ಚಿಸುವುದು.

 

ಹೆಸ್ಕಾಂ ಕಂಪನಿಯ ಧ್ಯೆಯೋದ್ದೇಶಗಳು:

ಹೆಸ್ಕಾಂ ಕಂಪನಿಯು ಆರ್ಥಿಕವಾಗಿ ಸ್ವತಂತ್ರವಾಗಿ ಗ್ರಾಹಕರ ಪರ ಕಾಳಜಿ ಹೊಂದಿದ ಸಂಸ್ಥೆಯಾಗಿ ಹೊರಹೊಮ್ಮಲು ನಾವು ಈ ಕೆಳಗಿನ ಧ್ಯೇಯಗಳನ್ನು ಹೊಂದಿದ್ದೇವೆ.

 

100% ಗ್ರಾಮೀಣ ವಿದ್ಯುದ್ದೀಕರಣ.

 

ಶೇಕಡಾ 100 ರಷ್ಟು ಮಾಪಕ ಅಳವಡಿಕೆ, ಮಾಪಕ ಓದುವಿಕೆ, ಬಿಲ್ ನೀಡುವುದು ಮತ್ತು ಸಂಗ್ರಹಣೆ.

 

ತಪ್ಪಿತಸ್ಥರ ಶೇಕಡಾ 100 ರಷ್ಟು ವಿದ್ಯುತ್ ಸಂಪರ್ಕ ತಪ್ಪಿಸುವುದು.

 

ವಿತರಣೆಯಲ್ಲಿ ಟಿ & ಡಿ ನಷ್ಟವನ್ನು ಕ್ರಮೇಣವಾಗಿ ಶೇಖಡ 15% ಗಿಂತ ಕಡಿಮೆಗೊಳಿಸುವದು.

 

ಫೀಡರನಿಂದ  ಗ್ರಾಹಕ ಅನುಸ್ಥಾಪನೆಗಳಿಗೆ ಸರಿಯಾಗಿ ಎಲ್ಲಾ ಹಂತಗಳಲ್ಲಿ 100% ಮೀಟರಿಂಗ ಮಾಡುವಿಕೆ.

 

ಶೇಕಡಾ 100 ರಷ್ಟು ಕಂಪ್ಯೂಟರೀಕರಣದಿಂದ ತಪ್ಪಿಲ್ಲದ ಬಿಲ್ ನೀಡುವಿಕೆ.

 

ಆಯ್ದ ಫೀಡರಗಳಲ್ಲಿ ಶೇಕಡಾ 100 ರಷ್ಟು ನಂಬಲರ್ಹ ವಿದ್ಯುತ್ ಸರಬರಾಜಿನ ಸೂಚ್ಯಂಕಕ್ಕೆ ತರುವುದು.

 

ಜಾಗೃತ  ಚಟುವಟಿಕೆ ಗಳ ಮೂಲಕ ವಾಣಿಜ್ಯ ನಷ್ಟವನ್ನು ನಿವಾರಿಸುವದು

 

ಖಚಿತ ಮಾಹಿತಿ ಸಂಗ್ರಹ ಮತ್ತು ವರದಿ ಮಾಡುವುದು.

 

ಹೆಚ್ಚಿನ ಚಟುವಟಿಕೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ಮಾಡುವದು.

 

ಎ.ಟಿ ಮತ್ತು ಸಿ ನಷ್ಟವನ್ನು ಕಡಿಮೆ ಮಾಡುವ ಮೂಲಕ ವ್ಯವಹಾರ ದಕ್ಷತೆಯನ್ನು ಹೆಚ್ಚಿಸುವುದು.

 

ನಮ್ಮ ಚಿಂತನಾ ಮೌಲ್ಯಗಳು:

 

ಗ್ರಾಹಕರ ಕಡೆಗೆ ಕೇಂದ್ರೀಕೃತ ಮತ್ತು ಸ್ಪಂದನ

 

ವಾಣಿಜ್ಯಕವಾಗಿ ದಕ್ಷತೆಯಿಂದಿರುವುದು

 

ಫಲಿತಾಂಶಕಾಯಕ ಚಟುವಟಿಕೆಗಳು

 

ನೌಕರರ ಹಿತ ಮತ್ತು ಕಲ್ಯಾಣ